alex Certify ವಿದ್ಯಾರ್ಥಿಗಳ ‘KSRTC’ ಬಸ್ ಪಾಸ್ ಗೆ ಅರ್ಜಿ ಸಲ್ಲಿಕೆ ಹೇಗೆ ? ದರ ಎಷ್ಟು ಇಲ್ಲಿದೆ ಮಾಹಿತಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳ ‘KSRTC’ ಬಸ್ ಪಾಸ್ ಗೆ ಅರ್ಜಿ ಸಲ್ಲಿಕೆ ಹೇಗೆ ? ದರ ಎಷ್ಟು ಇಲ್ಲಿದೆ ಮಾಹಿತಿ.!

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2023-24ನೇ ಶೈಕ್ಷಣಿಕ ವರ್ಷದ ಉಚಿತ ರಿಯಾಯಿತಿ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಐಡಿ https://sevasindhusevrvice.karnataka.in/buspasservices ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಪಾಸ್ ವಿತರಣೆ ಮಾಡುವ ಕೌಂಟರ್ ಗಳ ವಿವರಗಳಿಗಾಗಿ http://ksrtc.karnataka.gov.in ವೆಬ್ಸೈಟ್ ಮೂಲಕ ತಿಳಿಯಬಹುದು ಎಂದು ಕ.ರಾ.ರ.ಸಾ. ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಕರಾರಸಾನಿಗಮ ವ್ಯಾಪ್ತಿಯ 129 ಪಾಸ್ ವಿತರಣಾ ಕೌಂಟರ್ ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್ಸೈಟ್ ನಲ್ಲಿ ಒದಗಿಸಲಾಗಿದೆ.

ದರ ಎಷ್ಟು..?
ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಸ್ ದರ – ₹150 ರೂ
ಪ್ರೌಢ ಶಾಲಾ ಬಾಲಕರ ಪಾಸ್ ದರ- ₹750 ರೂ
ಪರಿಶಿಷ್ಟ- ಪರಿಶಿಷ್ಟ ಪಂಗಡದ ಬಾಲಕರಿಗೆ- ₹150 ರೂ
ITI ಡಿಪ್ಲೊಮಾ, SC-ST ವಿದ್ಯಾರ್ಥಿಗಳ ಪಾಸ್ ದರ- ₹160 ರೂ
SC-ST ವಿದ್ಯಾರ್ಥಿಗಳಿಗೆ ಪಾಸ್ ದರ – ₹150 ರೂ
ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಪಾಸ್ ದರ- ₹1550 ರೂ
ವೃತ್ತಿಪರ ಕೋರ್ಸ್ SC-ST ವಿದ್ಯಾರ್ಥಿಗಳ ಪಾಸ್ ದರ- ₹150 ರೂ
ಸಂಜೆ ಕಾಲೇಜು ವಿದ್ಯಾರ್ಥಿಗಳ ಪಾಸ್ ದರ- ₹1350 ರೂ
ಪ್ರೌಢ ಶಾಲಾ ಬಾಲಕೀಯರು (ಗಡಿ ಭಾಗದ ಆಚೆಗೆ) – ₹150 ರೂ
ಕಾಲೇಜು- ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ- ₹1050 ರೂ
SC-ST ವಿದ್ಯಾರ್ಥಿಗಳ ಪಾಸ್ ದರ- ₹150 ರೂ
ಐಟಿಐ ವಿದ್ಯಾರ್ಥಿಗಳ ಪಾಸ್ ದರ (12 ತಿಂಗಳ ಅವಧಿ) ₹1310 ರೂ

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...