ಬೆಂಗಳೂರು : ಈಗಿನ ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಹಾಗೂ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕಡ್ಡಾಯವಾಗಿದೆ. ಲಿಂಕ್ ಆದ ಮೊಬೈಲ್ ಗೆ ಒಟಿಪಿ ಬಾರದಿದ್ದರೆ ಯಾವ ಅರ್ಜಿಗಳನ್ನೂ ಕೂಡ ಯಶಸ್ವಿಯಾಗಿ ಹಾಕಲು ಸಾಧ್ಯವಿಲ್ಲ.
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯ ಸಿಮ್, ಅಥವಾ ಫೋನ್ ಕಳೆದು ಹೋದರೆ ಹೊಸ ನಂಬರ್ ಸೇರಿಸುವುದು ಹೇಗೆ.? ಏನು ಮಾಡಬೇಕು. ಇಲ್ಲಿದೆ ಮಾಹಿತಿ
ನಾವು ಹೊಸ ಸಿಮ್ ಖರೀದಿಸಿದಾಗ ಹಳೆ ನಂಬರ್ ಬದಲಾಗಿ ಹೊಸ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವೇ ಅಪ್ ಡೇಟ್ ಮಾಡಲು ಸಾಧ್ಯವಿಲ್ಲ. ನೀವು ನೇರವಾಗಿ ಆಧಾರ್ ಕೇಂದ್ರಗಳಿಗೆ ಹೋಗಿ enrollment / correction update form ಭರ್ತಿ ಮಾಡಿ ನಿಮ್ಮ ಹೊಸ ಸಂಖ್ಯೆಯನ್ನು ಆಧಾರ್ ಗೆ ಅಪ್ಡೇಟ್ ಮಾಡಿಸಬೇಕು ಅಲ್ಲದೇ ಆದರೆ ನೀವು UIDAI ನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಶುಲ್ಕ ಪಾವತಿ ಮಾಡಿ ಮೊಬೈಲ್ ಸಂಖ್ಯೆ ಬದಲಾಯಿಸುವುದಕ್ಕೆ ನೋಂದಣಿ ಮಾಡಿಸಿಕೊಳ್ಳಬಹುದು.
ಹಂತಗಳು
1) uidai.gov.in ವೆಬ್ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ.
2) ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಕ್ಯಾಪ್ಚಾವನ್ನು ಟೈಪ್ ಮಾಡಿ.
3) ರಿಜಿಸ್ಟರ್ ಮೊಬೈಲ್ ಸಂಖ್ಯೆ ಗೆ Send OTP ಆಯ್ಕೆ ಮೇಲೆ ಕ್ಲಿಕ್ ಮಾಡಿ.
4) ಒಟಿಪಿ ಹಾಕಿದ ಮೇಲೆ ಆನ್ಲೈನ್ ಆಧಾರ್ ಸೇವೆಗಳು ಮೇಲೆ ಕ್ಲಿಕ್ ಮಾಡಿ . ಈ ಬಳಿಕ ಅಪ್ಡೇಟ್ ಮಾಡ ಬಯಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇರುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
5) ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನ್ಯೂ ಪೇಜ್ ಓಪನ್ ಆಗುತ್ತದೆ, ಅಲ್ಲಿರುವ ಕ್ಯಾಪ್ಚಾವನ್ನು ನಮೂದಿಸಿನಂತರ ನಿಮ್ಮ ಮೊಬೈಲ್ ಸಂಖ್ಯೆಯು OTP ಯನ್ನು ಸ್ವೀಕರಿಸುತ್ತದೆ. ನೀವು OTP ಅನ್ನು ದೃಢೀಕರಿಸಿದ ನಂತರ Save and Continue ಮೇಲೆ ಕ್ಲಿಕ್ ಮಾಡಿ.
6) ಬಳಿಕ ನಿಗದಿತ ಶುಲ್ಕ ಪಾವತಿಸಿ ಪ್ರಿಂಟ್ ಔಟ್ ಪಡೆದುಕೊಳ್ಳಿ. ನಂತರ ಇದರ ಜೊತೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿಕೊಟ್ಟು ಮನವಿ ಸಲ್ಲಿಸಿ.