ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಗ್ರಾಹಕರಿಗೆ ವಾಟ್ಸಾಪ್ ಮೂಲಕ 24/7 ಸೇವೆಗಳನ್ನು ಲಭ್ಯವಾಗುವಂತೆ ಮಾಡಿದೆ. ಪಾಲಿಸಿದಾರರು ಇನ್ನು ಮುಂದೆ ಜೀವ ವಿಮಾ ಪ್ಲಾನ್‌ಗಳ ಕುರಿತ ಮಾಹಿತಿಗಳು ಹಾಗೂ ಸೇವೆಗಳನ್ನು ಎಲ್‌ಐಸಿಯ ಅಧಿಕೃತ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ವಾಟ್ಸಾಪ್ ಮೂಲಕ ಸಾಲದ ಅರ್ಹತೆ, ಮರುಪಾವತಿ ಅಂದಾಜುಗಳು, ಪಾಲಿಸಿ ಸ್ಥಿತಿಗತಿಗಳು, ಬೋನಸ್ ಮಾಹಿತಿ, ಘಟಕಗಳ ಸ್ಟೇಟ್ಮೆಂಟ್‌ಗಳು, ಎಲ್‌ಐಸಿ ಸೇವೆಗಳಿಗೆ ಲಿಂಕ್‌ಗಳು, ಪ್ರೀಮಿಯಂ ಬಾಕಿ ಕುರಿತಂತೆ ಅಪ್ಡೇಟ್‌ಗಳು, ಸಾಲದ ಬಡ್ಡಿ ಬಾಕಿ ನೋಟಿಫಿಕೇಶನ್‌ಗಳು, ಪಾವತಿ ಮಾಡಿದ ಪ್ರೀಮಿಯಂನ ಪ್ರಮಾಣ ಪತ್ರಗಳು, ಆಪ್ಟ್-ಇನ್/ಆಪ್ಟ್ ಔಟ್ ಆಯ್ಕೆಗಳು ಸೇರಿದಂತೆ ಅನೇಕ ಸೇವೆಗಳನ್ನು ಪಾಲಿಸಿದಾರರು ಪಡೆಯಬಹುದಾಗಿದೆ.
ಎಲ್‌ಐಸಿ ವಾಟ್ಸಾಪ್ ಸೇವೆಗಳಿಗೆ ಚಂದಾದಾರರಾಗಲು ಹೀಗೆ ಮಾಡಿ.
– ಎಲ್ಲಕ್ಕಿಂತ ಮೊದಲು www.licindia.inಗೆ ಭೇಟಿ ಕೊಟ್ಟು, “Customer Portal” ಮೇಲೆ ಕ್ಲಿಕ್ ಮಾಡಿ.
– ಒಂದು ವೇಳೆ ನೀವು ಮುಂಚೆಯೇ ಈ ಪೋರ್ಟಲ್‌ನಲ್ಲಿ ನೋಂದಣಿಯಾಗದೇ ಇದ್ದರೆ, “New user” ಮೇಲೆ ಕ್ಲಿಕ್ ಮಾಡಿ.
– ಮುಂದಿನ ಸ್ಕ್ರೀನ್‌ನಲ್ಲಿ ನೀವು ನಿಮ್ಮ ಆಯ್ಕೆಯ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್‌ಗಳನ್ನು ಆರಿಸಿ, ಸಬ್‌ಮಿಟ್ ಮಾಡಿ.
– ಈ ಹೊಸ ಐಡಿ ಬಳಸಿ ಲಾಗಿನ್ ಆಗಿ ‘Basic Services’ – “Add Policy” ಮೇಲೆ ಕ್ಲಿಕ್ ಮಾಡಿ.
– ನಿಮ್ಮೆಲ್ಲಾ ಮಿಕ್ಕ ಪಾಲಿಸಿಗಳಿಗೆ ನೋಂದಣಿಯಾಗಿ.
– ಈ ಹಂತದಲ್ಲಿ ಎಲ್ಲ ಮೂಲ ಸೇವೆಗಳು ನಿಮ್ಮ ನೋಂದಾಯಿತ ಪಾಲಿಸಿಗಳ ಪಟ್ಟಿಯಲ್ಲಿ ಸಿಗುತ್ತವೆ.
– ಎಲ್‌ಐಸಿ ಅಧಿಕೃತ ವಾಟ್ಸಾಪ್ ಸಂಖ್ಯೆ +91 8976862090ಯನ್ನು ನಿಮ್ಮ ದೂರವಾಣಿಯಲ್ಲಿ ಸೇವ್ ಮಾಡಿಕೊಳ್ಳಿ.
– ನಿಮ್ಮ ನೋಂದಾಯಿತ ಸಂಖ್ಯೆಯಿಂದ ‘Hi’ ಎಂದು ಈ ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿ.
– ಈಗ ನೀವು 11ರಲ್ಲಿ ನಿಮಗೆ ಬೇಕಾದ ಸೇವೆಗಳನ್ನು ಆಯ್ದುಕೊಳ್ಳಬಹುದು.
– ನಿಮ್ಮ ಆಯ್ಕೆಯ ಸಂಖ್ಯೆಯನ್ನು ಚಾಟ್‌ನಲ್ಲಿ ರಿಪ್ಲೈ ಮಾಡಿ.
– ನೀವು ವಿನಂತಿಸಿಕೊಂಡ ಮಾಹಿತಿಯನ್ನು ಎಲ್‌ಐಸಿ ನಿಮ್ಮೊಂದಿಗೆ ಶೇರ್ ಮಾಡಲಿದೆ.