ಬೀಜಿಂಗ್: ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದಾರೆ.
ಒಂದು ವರ್ಷದ ಹಿಂದೆಯೇ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದ್ದು, ರೋಗ ಉಲ್ಬಣವಾಗಿರುವುದು ಈಗ ಬಹಿರಂಗವಾಗಿದೆ. ಚೀನಾದ ಗನ್ನು ಪ್ರಾಂತ್ಯದ ರಾಜಧಾನಿ ಲನ್ ಜೌ ನಗರದಲ್ಲಿ 6000 ಕ್ಕೂ ಅಧಿಕ ಮಂದಿಗೆ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದೆ.
ಪ್ರಾಣಿಗಳ ಸಂಪರ್ಕದಿಂದ ಈ ರೋಗ ಬರುತ್ತದೆ. ಲಸಿಕೆ ಕಾರ್ಖಾನೆಯಲ್ಲಿ ವೈರಸ್ ಸೋರಿಕೆ ಆಗಿದ್ದರಿಂದ ರೋಗ ಹರಡಿದೆ ಎಂದು ಚೀನಾ ಆರೋಗ್ಯ ಆಯೋಗದಿಂದ ಮಾಹಿತಿ ನೀಡಲಾಗಿದೆ. ಕಳೆದ ವರ್ಷವೇ ರೋಗ ಲಕ್ಷಣವಿದ್ದ ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಬ್ರೂಸಲೋಸಿಸ್ ಮೇಕೆ, ಹಸು, ಹಂದಿ, ಕುರಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ದೇಶಗಳಲ್ಲಿ ನಾಯಿಗಳು ಕೂಡ ಈ ರೋಗಕ್ಕೆ ತುತ್ತಾಗಿವೆ. ಪಾಶ್ಚರೀಕರಿಸದ ಹಾಲು, ಚೀಸ್ ಮೊದಲಾದವುಗಳ ಸೇವನೆಯಿಂದ ಮನುಷ್ಯರಿಗೆ ರೋಗ ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.