ಇಂದಿನ ಕಾಲದಲ್ಲಿ ಹೆಚ್ಚು ಹಣವನ್ನು ಗಳಿಸಲು ಮತ್ತು ಅದನ್ನು ಉಳಿಸಲು ಮಾರ್ಗಗಳನ್ನು ಯೋಜಿಸುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ನೀವು ಸ್ಟಾಕ್ ಮಾರುಕಟ್ಟೆಯ ಬಗ್ಗೆ ಕಲಿತು ಹೂಡಿಕೆ ಮಾಡಬಹುದು, ಅಥವಾ ನೀವು ಹೆಚ್ಚುವರಿ ಕೆಲಸವನ್ನು ಮಾಡಬಹುದು.
ಆದರೆ ಕೀಟನ್ ವಾಘನ್ ಎಂಬ ಅಮೆರಿಕನ್ ವ್ಯಕ್ತಿ ಹೆಚ್ಚುವರಿ ಹಣವನ್ನು ಗಳಿಸಲು ವಿಚಿತ್ರವಾದ ಯೋಜನೆ ಮಾಡಿದ್ದಾನೆ. 19 ವರ್ಷದ ಕೀಟನ್ ರಿಯಲ್ ಎಸ್ಟೇಟ್ ಉದ್ಯೋಗಿ. ಆತ ಹೆಚ್ಚು ಹಣ ಗಳಿಸಲು ತನ್ನ ಐಷಾರಾಮಿ ಮನೆಯನ್ನು ಬಾಡಿಗೆಗೆ ನೀಡಿ, ತಾನು ಮನೆಯ ಗ್ಯಾರೇಜ್‌ನಲ್ಲಿ ಇದ್ದಾನೆ.
ಆತ ತನ್ನ ಮನೆಗೆ ಬಾಡಿಗೆದಾರರನ್ನು ಹುಡುಕಿದ್ದ. ನಂತರ ಆತ ಗ್ಯಾರೇಜ್ ನ್ನು ಪುಟ್ಟ ಮನೆಯನ್ನಾಗಿ ಪರಿವರ್ತಿಸಿ ಬಾಡಿಗೆದಾರರು ನೀಡುವ ಹಣದಿಂದ ಹೆಚ್ಚುವರಿ ಮೊತ್ತ ಗಳಿಸುತ್ತಿದ್ದಾನೆ.
ವರದಿಯ ಪ್ರಕಾರ ಅವನು ತನ್ನ ಟಿಕ್‌ಟಾಕ್ ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಗ್ಯಾರೇಜ್‌ನಲ್ಲಿ ವಾಸಿಸಲು ಹೇಗೆ ಹಣ ಪಡೆಯುತ್ತೇನೆ ಎಂಬುದನ್ನ ಬಹಿರಂಗಪಡಿಸಿದ್ದಾನೆ.
ನನ್ನ ಬಾಡಿಗೆದಾರರು ತಿಂಗಳಿಗೆ $2000 (ಅಂದಾಜು ರೂ. 1.65 ಲಕ್ಷ) ಪಾವತಿಸುತ್ತಾರೆ ಮತ್ತು ನನ್ನ ಅಡಮಾನವು ತಿಂಗಳಿಗೆ $1800 (ಸುಮಾರು 1.48 ಲಕ್ಷ ರೂ.) ಆಗಿದೆ. ನಾನು ಏನನ್ನೂ ಮಾಡದೆ $200 (ಅಂದಾಜು ರೂ. 16,000) ಹಣವನ್ನು ಗಳಿಸುತ್ತೇನೆ ಎಂದಿದ್ದಾನೆ.