alex Certify ಆಸ್ಟ್ರೇಲಿಯಾದಲ್ಲೂ ಇದ್ದಾರೆ ನಟ ಶಾರುಖ್‌ಗೆ ಹುಚ್ಚು ಅಭಿಮಾನಿಗಳು: 5 ದಿನ ಶೂಟಿಂಗಾಗಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದರು ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾದಲ್ಲೂ ಇದ್ದಾರೆ ನಟ ಶಾರುಖ್‌ಗೆ ಹುಚ್ಚು ಅಭಿಮಾನಿಗಳು: 5 ದಿನ ಶೂಟಿಂಗಾಗಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದರು ಅಭಿಮಾನಿಗಳು

ಶೂಟಿಂಗಾಗಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದರು ಅಭಿಮಾನಿಗಳು ಬಾಲಿವುಡ್ ಬಾದ್‌ಶಾಹ್‌ ಬ್ಲಾಕ್‌ಬ್ಲಸ್ಟರ್‌ ಸಿನೆಮಾಗಳಲ್ಲಿ ’ಚಕ್‌ ದೇ ಇಂಡಿಯಾ’ ಕೂಡ ಒಂದು, ಈ ಸಿನೆಮಾದ ಕಥಾ ವಸ್ತು ಕ್ರೀಡೆ ಆಗಿದ್ದರೂ, ಜನರು ಈ ಸಿನೆಮಾ ನೋಡಿ ಭಾವುಕರಾಗಿದ್ದೇ ಹೆಚ್ಚು. ಇನ್ನೂ ಈ ಚಲಚಿತ್ರದಲ್ಲಿ ಶಾರುಖ್ ಅಭಿನಯ ನೋಡಿ ಕೋಟ್ಯಾಂತರ ಅಭಿಮಾನಿಗಳು ಫುಲ್ ಫಿದಾ ಅಗ್ಹೋಗಿದ್ದರು.

ಈ ಸಿನೆಮಾ ರಿಲೀಸ್ ಆಗಿ ಏನಿಲ್ಲ ಅಂದರೂ 10-15 ವರ್ಷಗಳಾಗಿರಬಹುದು. ಆದರೂ ಇಂದಿಗೂ ಈ ಸಿನೆಮಾ ಎಷ್ಟೋ ಜನರ ಮನದ ಪುಟದಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಸಿನೆಮಾ ಈಗ ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದೆ ಆ ಒಂದ ಟ್ವಿಟ್. ಈ ಟ್ಟಿಟ್ಟರ್‌ನಲ್ಲಿ SRK ಜನಪ್ರಿಯತೆ ಆಸ್ಟ್ರೇಲಿಯಾದಲ್ಲೂ ಯಾವ ಮಟ್ಟದಲ್ಲಿ ಇದೆ ಅನ್ನೊದಕ್ಕೆ ಈ ಟ್ವಿಟ್ಟರ್‌ನಲ್ಲಿರುವ ವಿಡಿಯೋ ಸಾಕ್ಷಿಯಾಗಿದೆ.

ಅದು ’ಚಕ್ ದೇ ಇಂಡಿಯಾ’ ಸಿನೆಮಾದಲ್ಲಿ ಶೂಟಿಂಗ್ ಸಮಯ, ಸಿನೆಮಾ ತಂಡ ಆಸ್ಟ್ರೇಲಿಯಾದಲ್ಲಿ ಜಾಹೀರಾತೊಂದನ್ನ ಪ್ರಕಟಿಸಿತ್ತು ʼಆಸ್ಟ್ರೇಲಿಯಾದ ಸಿಡ್ನಿಯ ಸ್ಟೇಡಿಯಂನಲ್ಲಿ ಶಾರುಖ್ ನಟನೆಯ ಸಿನೆಮಾದ ಚಿತ್ರೀಕರಣ ನಡೆಯಲಿದೆ. ಅದು ಓಲಂಪಿಕ್ ಹಾಕಿ ದೃಶ್ಯವಾಗಿದ್ದು ಅಭಿಮಾನಿಗಳು ಅಲ್ಲಿ ಸೇರಬಹುದು ’ ಎಂದು ಹೇಳಲಾಗಿತ್ತು. ಶಾರುಖ್ ಬರುತ್ತಾರೆ ಅನ್ನೊ ಸುದ್ದಿ ಕೇಳಿದಾಕ್ಷಣ ಸಾವಿರಾರು ಸಂಖ್ಯೆ ಅಭಿಮಾನಿಗಳು ಆ ಸ್ಟೇಡಿಯಂನಲ್ಲಿ ಸೇರಿದ್ದರು. ಇದಿಷ್ಟು ಸಾಕಾಗಿತ್ತು ವಿದೇಶದಲ್ಲಿ ಶಾರುಖ್‌ಗೆ ಎಷ್ಟರ ಮಟ್ಟಿಗೆ ಅಭಿಮಾನಿಗಳಿದ್ಧಾರೆ ಅನ್ನೊದಕ್ಕೆ ಸಾಕ್ಷಿ. ಐದು ದಿನ ನಡೆದ ಸಿನೆಮಾ ಚಿತ್ರಿಕರಣದಲ್ಲೂ ಸ್ಟೇಡಿಯಂ ತುಂಬುವಷ್ಟು ಜನರು ಇದ್ದಿದ್ದು ವಿಶೇಷವಾಗಿತ್ತು.

ಈ ಸಮಯದಲ್ಲಿ ಶಾರುಖ್ ಸಹ ಅಭಿಮಾನಿಗಳನ್ನ ನಿರಾಸೆ ಮಾಡಿರಲಿಲ್ಲ. ಅವರು ಆಗಾಗ ಅವರಿಗಾಗಿ ಹಾಡುವುದು, ಆಟ ಆಡುವುದು, ಡೈಲಾಗ್‌ಗಳನ್ನ ಹೇಳಿ ಮನರಂಜಿಸುತ್ತಿದ್ದರು. ನಿರ್ದೇಶಕರು ಆ ಕ್ಷಣವನ್ನೂ ಸಹ ತಮ್ಮ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಆ ದೃಶ್ಯವನ್ನ ಸಿನೆಮಾಗಳಲ್ಲೂ ಉಪಯೋಗಿಸಲಾಯಿತು.

2017ರಲ್ಲಿ ಆದ ಅನುಭವ ಈ ಟ್ವೀಟ್ ಮತ್ತೆ ಮರುಕಳಿಸುವಂತೆ ಮಾಡಿದೆ. ನೆಟ್ಟಿಗರು ಸಹ ಆ ದಿನದ ನೆನಪನ್ನ ಮಾಡಿಕೊಂಡು ಶಾರುಖ್ ವರ್ಚಸ್ಸು ವಿದೇಶದಲ್ಲೂ ಎಷ್ಟಿದೆ ಅನ್ನೊದನ್ನ ಕಾಮೆಂಟ್ ಬಾಕ್ಸ್‌ನಲ್ಲಿ ಹೇಳಿಕೊಳ್ಳುತ್ತಿದ್ಧಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...