alex Certify ಗರ್ಭಾವಸ್ಥೆಯಲ್ಲಿ ಡ್ರೈ ಫ್ರೂಟ್​​ ಸೇವನೆ ಸುರಕ್ಷಿತವೇ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಡ್ರೈ ಫ್ರೂಟ್​​ ಸೇವನೆ ಸುರಕ್ಷಿತವೇ….?

ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದರಿಂದಾಗಿ ಆಕೆ ತುಂಬಾನೆ ಸಮಸ್ಯೆಗಳನ್ನ ಎದುರಿಸಬೇಕಾಗು ತ್ತೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚೆಚ್ಚು ಪೋಷಕಾಂಶಯುಕ್ತ ಆಹಾರದ ಅವಶ್ಯಕತೆ ಇರುತ್ತದೆ. ಡ್ರೈ ಫ್ರೂಟ್ಸ್​ನಲ್ಲಿ ಹೆಚ್ಚಿನ ಪೋಷಕಾಂಶ ಅಡಗಿದೆ. ಹಾಗಂತ ಇದು ಗರ್ಭಿಣಿ ದೇಹಕ್ಕೆ ಎಷ್ಟು ಉಪಯುಕ್ತ ಅನ್ನೋದನ್ನ ತಿಳಿದುಕೊಳ್ಳೋಣ.

ಗರ್ಭಿಣಿಯಾಗಿದ್ದಾಗ ವೈದ್ಯರು ಹೆಚ್ಚಿನ ಉಷ್ಣ ಇರುವ ಆಹಾರ ಸೇವಿಸಬೇಡಿ ಎಂದು ಸಲಹೆ ನೀಡ್ತಾರೆ. ಗರ್ಭಿಣಿಯರು ಡ್ರೈ ಫ್ರೂಟ್ಸ್​ನ್ನು ರಾತ್ರಿ ಹೊತ್ತು ನೆನೆಸಿಟ್ಟು ಬೆಳಗ್ಗೆ ತಿನ್ನೋದು ಒಳ್ಳೆಯದು. ಇದರಿಂದ ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ಆದರೆ ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿ ಇರೋದ್ರಿಂದ ವೈದ್ಯರ ಸಲಹೆ ಮೇರೆಗೆ ಡ್ರೈ ಫ್ರೂಟ್ಸ್ ಸೇವನೆ ಮಾಡಿ.

ಡ್ರೈ ಫ್ರೂಟ್ಸ್​ನಲ್ಲಿ ವಿಟಮಿನ್​, ಅಮಿನೋ ಆಸಿಡ್​, ಫೈಬರ್​ ಹಾಗೂ ಫ್ರುಕ್ಟೋಸ್​ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇದು ಮಾತ್ರವಲ್ಲದೇ ವಿಟಮಿನ್​ ಬಿ 1, ಬಿ9, ಸಿ, ಇ, ಹೆಚ್​ ಕೂಡ ಇದೆ. ಅಲ್ಲದೇ ಕಬ್ಬಿಣಾಂಶ, ಕ್ಯಾಲ್ಶಿಯಂ, ಮ್ಯಾಗ್ನೀಷಿಯಂ, ಪೊಟ್ಯಾಶಿಯಂ, ಜಿಂಕ್​ ಪಾಸ್ಪರಸ್​ ಕೂಡ ಇದೆ.

ಗರ್ಭಾವಸ್ಥೆಯಲ್ಲಿ ನೀವು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಡ್ರೈಫ್ರೂಟ್​ ಸೇವನೆ ಆದಷ್ಟು ಕಡಿಮೆ ಮಾಡೋದು ಒಳ್ಳೆಯದು. ಇದರಲ್ಲಿ ಸಕ್ಕರೆ ಹಾಗೂ ಕೊಬ್ಬಿನ ಅಂಶ ಅತಿಯಾಗಿ ಇರೋದ್ರಿಂದ ನಿಮ್ಮ ತೂಕ ಇನ್ನಷ್ಟು ಹೆಚ್ಚಾಗಲಿದೆ. ತೂಕ ಅತಿಯಾದಷ್ಟು ಹೆರಿಗೆ ಸಮಯದಲ್ಲಿ ತೊಂದರೆ ಉಂಟಾಗಲೂಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...