alex Certify ಹೀಟ್​ ತಡೆದುಕೊಳ್ಳಲು ಆಸ್ಪಿರಿನ್​ ಉತ್ಪಾದಿಸುವ ಸಸ್ಯಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಟ್​ ತಡೆದುಕೊಳ್ಳಲು ಆಸ್ಪಿರಿನ್​ ಉತ್ಪಾದಿಸುವ ಸಸ್ಯಗಳು

ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಮನುಷ್ಯನಿಗಷ್ಟೇ ಅಲ್ಲ, ಪ್ರಕೃತಿಯು ಪ್ರಾಣಿ ಪಕ್ಷಿಗಳಿಗೂ ವಿವಿಧ ರೂಪದಲ್ಲಿ ಅವಕಾಶ ಮಾಡಿಕೊಟ್ಟಿದೆ. ಸಸ್ಯಗಳಿಗೂ ಸಹ ಇಂತಹ ಅವಕಾಶ ಇದೆ ಎಂಬ ಸಂಗತಿಯನ್ನು ವಿಜ್ಞಾನಿಗಳು ಅಧ್ಯಯನ ಮುಖೇನ ಬೆಳಕು ಚೆಲ್ಲಿದ್ದಾರೆ.

ಬರ ಅಥವಾ ಪ್ರವಾಹದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ವಿಧದ ಸಸ್ಯಗಳು ನೈಸಗಿರ್ಕವಾಗಿ ಆಸ್ಪಿರಿನ್​ಗೆ ಹೋಲಿಸಬಹುದಾದ ಆಮ್ಲವನ್ನು ಸ್ರವಿಸುತ್ತದೆ.

ಸೈನ್ಸ್​ ಅಡ್ವಾನ್ಸಸ್​ನಲ್ಲಿ ಪ್ರಕಟವಾದ ಒಂದು ಅಧ್ಯಯನದಂತೆ, ಕ್ಯಾಲಿಫೋನಿರ್ಯಾ ವಿಶ್ವವಿದ್ಯಾಲಯದ ಸಂಶೋಧಕರು ಅರಾಬಿಡೋಪ್ಸಿಸ್​ ಎಂಬ ಮಾದರಿ ಸಸ್ಯವನ್ನು ಅಧ್ಯಯನ ಮಾಡಿದರು, ಇದನ್ನು ಸಾಮಾನ್ಯವಾಗಿ ಕಳೆ ಎಂದು ಪರಿಗಣಿಸಲಾಗುತ್ತದೆ.

ವಿಜ್ಞಾನಿಗಳ ತಂಡವು ಬರಗಾಲದ ಅವಧಿಯಲ್ಲಿ ಅಧ್ಯಯನ ಮಾಡಿದ ಸಸ್ಯವು ಎಂಇಸಿಪಿಪಿ ಎಂದು ಕರೆಯಲ್ಪಡುವ ಅಣುವನ್ನು ಸಕ್ರಿಯಗೊಳಿಸುತ್ತದೆ ಎಂದು ಕಂಡುಹಿಡಿದಿದೆ. ಸಸ್ಯದ ಜೀವಕೋಶಗಳಲ್ಲಿ ಈ ಅಣುವಿನ ಶೇಖರಣೆಯು ಸ್ಯಾಲಿಸಿಲಿಕ್​ ಆಮ್ಲದ ಉತ್ಪಾದನೆಗೆ ಅನುಕೂಲಕರವಾಗಿದೆ, ಅದು ನಂತರ ಅದರ ರಕ್ಷಣಾತ್ಮಕ ಕ್ರಿಯೆಗೆ ಬಳಸುತ್ತದೆ.

BIG NEWS: ಕಳಪೆ ಕಾಮಗಾರಿ; ಬಿಬಿಎಂಪಿ ಇಬ್ಬರು ಎಂಜಿನಿಯರ್ ಗಳು ಸಸ್ಪೆಂಡ್

“ನಾವು ಮಾಡುವಂತೆಯೇ ಸಸ್ಯಗಳು ಸಹ ನೋವು ನಿವಾರಕವನ್ನು ಬಳಸುತ್ತವೆ” ಎಂದು ಯುಸಿಆರ್​ ಸಸ್ಯ ಜೀವಶಾಸ್ತ್ರಜ್ಞ ಮತ್ತು ಲೇಖಕ ವಿಲ್ಹೆಲ್ಮಿನಾ ವ್ಯಾನ್​ ಡಿ ವೆನ್​ ಹೇಳಿದ್ದಾರೆ.

ಸ್ಯಾಲಿಸಿಲಿಕ್​ ಆಮ್ಲವು ಹವಾಮಾನ ಬದಲಾವಣೆಯೊಂದಿಗೆ ಹೆಚ್ಚು ಪ್ರಚಲಿತವಾಗುತ್ತಿರುವ ಒತ್ತಡ ತಡೆದುಕೊಳ್ಳಲು ಸಸ್ಯಗಳಿಗೆ ಸಹಾಯ ಮಾಡುತ್ತದೆ, ಅದನ್ನು ಉತ್ಪಾದಿಸುವ ಸಸ್ಯಗಳ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಇದು ದೈನಂದಿನ ಜೀವನದಲ್ಲಿ ಹವಾಮಾನ ಬದಲಾವಣೆಯ ಸವಾಲು ಎದುರಿಸುವಲ್ಲಿ ಒಂದು ಹೆಜ್ಜೆ ಮುಂದಿದೆ ಲೇಖಕ ಮತ್ತು ಯುಸಿಆರ್​ ಕಟಯೂನ್​ ದೆಹೆಶ್​ ವಿವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...