ನಿವೃತ್ತ ಸರ್ಕಾರಿ ನೌಕರರು, ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಈ ತಿಂಗಳು, ಆಯಾ ಬ್ಯಾಂಕುಗಳಿಗೆ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿದ್ರೆ ಮಾತ್ರ, ಮಾಸಿಕ ಪಿಂಚಣಿ ಸಿಗಲಿದೆ. ಪ್ರತಿ ವರ್ಷ, ನವೆಂಬರ್ 30, ಪ್ರಮಾಣ ಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಇದಕ್ಕೂ ಮೊದಲು ಪ್ರಮಾಣ ಪತ್ರವನ್ನು ಬ್ಯಾಂಕ್ ಗೆ ಸಲ್ಲಿಸಬೇಕಾಗುತ್ತದೆ. ಪಿಂಚಣಿದಾರರು, ಜೀವನ ಪ್ರಮಾಣ ಪತ್ರ ಸಲ್ಲಿಸಲು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ.
BIG NEWS: ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ಕೊರೊನಾ 3ನೇ ಅಲೆ ಬಗ್ಗೆ ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ICMR
ಪಿಂಚಣಿದಾರರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅಂಚೆ ಕಚೇರಿ ಅಥವಾ ಬೇರೆ ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ, ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಾಗಿಲ್ಲ. ಮನೆಯಲ್ಲೇ ಕುಳಿತು ಈ ಕೆಲಸವನ್ನು ಮಾಡಬಹುದು. 2021 ರ ಸೆಪ್ಟೆಂಬರ್ 20 ರಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಹೊರಡಿಸಿದ ಸುತ್ತೋಲೆ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳ ಮನೆಬಾಗಿಲಿನ ಬ್ಯಾಂಕಿಂಗ್ ಮೈತ್ರಿ ಅಥವಾ ಅಂಚೆ ಇಲಾಖೆಯ ಮನೆಬಾಗಿಲಿನ ಸೇವೆಯನ್ನು ಬಳಸಿಕೊಂಡು, ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.
ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗಳ ಅಡಿಯಲ್ಲಿ, ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು. 12 ಸಾರ್ವಜನಿಕ ವಲಯದ ಬ್ಯಾಂಕುಗಳು, ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲು ಮೈತ್ರಿ ಮಾಡಿಕೊಂಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸೇರಿದಂತೆ 12 ಬ್ಯಾಂಕ್ ಗಳಿವೆ.
ಈ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ…..! 28 ರೂ. ಪಾವತಿಸಿ 4 ಲಕ್ಷ ಲಾಭ ಪಡೆಯಿರಿ
ಪಿಂಚಣಿದಾರರು ಮೊದಲು ಮೊಬೈಲ್ ಆಪ್, ವೆಬ್‌ಸೈಟ್ ಅಥವಾ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಸೇವೆಯನ್ನು ಕಾಯ್ದಿರಿಸಬೇಕು. ಅದೇ ದಿನಾಂಕ ಹಾಗೂ ಸಮಯದಂದು ಏಜೆಂಟ್ ಪಿಂಚಣಿದಾರರ ಮನೆಗೆ ಭೇಟಿ ನೀಡುತ್ತಾರೆ. ಡಿಎಸ್ಬಿ, ವೆಬ್ ಪೋರ್ಟಲ್, ಟೋಲ್ ಫ್ರೀ ನಂಬರ್, ಇದ್ರಲ್ಲಿ ಯಾವುದನ್ನಾದ್ರೂ ಬಳಸಿಕೊಂಡು,ಡೋರ್ ಸ್ಟೆಪ್ ಸೇವೆ ಪಡೆಯಬಹುದು.
ಸೇವೆಯನ್ನು ಕಾಯ್ದಿರಿಸಲು, ಗೂಗಲ್ ಪ್ಲೇ ಸ್ಟೋರ್ ನಿಂದ Doorstep Banking ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. Doorstepbanks.com ಅಥವಾ www.dsb.imfast.co.in/doorstep/login ಗೆ ಭೇಟಿ ನೀಡಿ, ದಿನಾಂಕ ಕಾಯ್ದಿರಿಸಬಹುದು. ಇಲ್ಲವೆ 18001213721 ಅಥವಾ 18001037188 ಗೆ ಕರೆ ಮಾಡಬಹುದು.
ಈ ಸೇವೆಗೆ ನೀವು ಶುಲ್ಕ ಭರಿಸಬೇಕಾಗುತ್ತದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಜಿಎಸ್‌ಟಿ ಸೇರಿ 75 ರೂಪಾಯಿ ಪಾವತಿಸಬೇಕು. ಅಂಚೆ ಕಚೇರಿಯಲ್ಲೂ ಈ ಸೌಲಭ್ಯವಿದೆ. ಪಿಂಚಣಿದಾರರ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಈ ಸೇವೆ ಪಡೆಯಬಹುದು. ಪಿಂಚಣಿದಾರರು ಪೋಸ್ಟ್ ಇನ್ಫೋ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಸೇವೆ ಐಪಿಪಿಬಿ ಮತ್ತು ಐಪಿಪಿಬಿ ಅಲ್ಲದ ಗ್ರಾಹಕರಿಗೆ ಲಭ್ಯವಿದೆ.
ಬೇಡಿಕೆಯಿರುವ ಈ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸಿ ಹಣ
ಅಂಚೆ ಕಚೇರಿಯ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆಯನ್ನು ಪಡೆಯಲು, ಗ್ರಾಹಕರು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಪೋಸ್ಟ್ ಮ್ಯಾನ್ ಮೂಲಕ ಈ ಸೇವೆ ಪಡೆಯಬಹುದು. ಪಿಂಚಣಿದಾರರು https://jeevanpramaan.gov.in/ppouser/login ಲಿಂಕ್ ಮೂಲಕ ಜಿಟಲ್ ಲೈಫ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಬಹುದು. ಪೋಸ್ಟ್ ಮ್ಯಾನ್ ಅಥವಾ ಗ್ರಾಮೀಣ ಡಾಕ್ ಸೇವಕ್ ಮನೆಗೆ ಬರುವ ಮೊದಲು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಂಚಣಿ ವಿಧ, ಪಿಪಿಒ ಸಂಖ್ಯೆ, ಪಿಂಚಣಿ ಜಮಾ ಮಾಡಿದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು.