ಕೊರೋನಾ ವೈರಸ್‌ನ ಡೆಲ್ಟಾವತಾರಿಯ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ, ಅದಾಗಲೇ ಕಾಣಿಸಿಕೊಂಡಿರುವ ಸೋಂಕಿನ ಹೊಸ ಅವತಾರ – ಒಮಿಕ್ರಾನ್ – ಅನೇಕ ದೇಶಗಳು ತಮ್ಮ ಗಡಿ ನಿರ್ಬಂಧಗಳ ಬಗ್ಗೆ ಇನ್ನೊಮ್ಮೆ ಚಿಂತನೆಗೆ ಹಚ್ಚಿದೆ.
ಒಮಿಕ್ರಾನ್ ಪತ್ತೆಯಾದಾಗಿನಿಂದ ಬಹುತೇಕ ಇಡೀ ವಿಶ್ವವೇ ಅನೇಕ ನಿರ್ಬಂಧಗಳನ್ನು ಹೇರಿಕೊಳ್ಳಲು ಮುಂದಾಗಿದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಘಟನೆ (ಐಎಟಿಎ) ತಿಳಿಸಿದೆ.
ಮಂಗಳವಾರ ಈ ಕೆಲಸ ಮಾಡಿದ್ರೆ ಕಾಡುತ್ತೆ ಆರ್ಥಿಕ ನಷ್ಟ
ಅಮೆರಿಕ, ರಷ್ಯಾ, ಯುಕ್ರೇನ್, ಆಸ್ಟ್ರೇಲಿಯಾ ಮತ್ತು ಬ್ರೆಜ಼ಿಲ್‌ಗಳಲ್ಲಿ; ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ, ನಮೀಬಿಯಾ, ಮೊಜ಼ಾಂಬಿಕ್, ಎಸ್ಟ್ವಾನಿ, ಜಿಂಬಾಬ್ವೆ ಸೇರಿದಂತೆ ಆಫ್ರಿಕಾದ ಕೆಲವೊಂದು ದೇಶಗಳಿಂದ ಬರುವ ಪ್ರಯಾಣಿಕರ ಮೆಲೆ ಪ್ರಯಾಣ ನಿರ್ಬಂಧ ಹೇರಲಾಗಿದೆ.
ಜಗತ್ತಿನೆಲ್ಲೆಡೆ ಗಡಿ ನಿರ್ಬಂಧಗಳು ನಿಧಾನವಾಗಿ ತೆರವುಗೊಳ್ಳುತ್ತಾ ಸಾಗಿದ ವೇಳೆಯಲ್ಲೇ ಸತತ ಏಳು ವಾರಗಳ ಮಟ್ಟಿಗೆ ಸೋಂಕಿನ ಸಂಖ್ಯೆಗಳು ಏರಿಕೆಯಾಗುತ್ತಾ ಸಾಗಿದ ಕಾರಣ ಮತ್ತೊಮ್ಮೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಚಳಿಗಾಲದಲ್ಲಿ ಹೀಗಿರಲಿ ಕೂದಲಿನ ರಕ್ಷಣೆ
ಅದಾಗಲೇ 40 ದೇಶಗಳಿಗೆ ಹಬ್ಬಿರುವ ಒಮಿಕ್ರಾನ್ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಭಾರತ ಸರ್ಕಾರವು ’ರಿಸ್ಕ್‌ನಲ್ಲಿರುವ’ ದೇಶಗಳಿಂದ ಬರುವ ಪ್ರಯಾಣಿಕರಿಗೆ ಇಲ್ಲಿ ಆಗಮಿಸುತ್ತಲೇ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಕಂಡುಬಂದಲ್ಲಿ ಕ್ವಾರಂಟೈನ್ ಹಾಗೂ ಪಾಸಿಟಿವ್ ಕಂಡುಬಂದಲ್ಲಿ ಐಸೋಲೇಷನ್‌ಗೆ ಒಳಪಡಿಸುವುದಾಗಿ ಪ್ರಯಾಣಿಕರಿಗೆ ತಿಳಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಒಮಿಕ್ರಾನ್ ಕೋವಿಡ್ ಸೋಂಕಿನ ಚಿಕಿತ್ಸೆಗೆ ಅದಾಗಲೇ ತೆಗೆದುಕೊಳ್ಳುತ್ತಿರುವ ಕ್ರಮಗಳಿಗಿಂತ ಭಿನ್ನವಾದ ಕ್ರಮಗಳೇನೂ ಸದ್ಯಕ್ಕೆ ಬೇಕಾಗಿ ಬಂದಿರದ ಕಾರಣ ಜಗತ್ತಿನ ಬಹುತೇಕ ದೇಶಗಳಲ್ಲಿ ಭಾಗಶಃ ನಿರ್ಬಂಧಗಳನ್ನು ಮಾತ್ರವೇ ಹೇರಲಾಗಿದೆ.
ಕೋವಿಡ್ ಲಸಿಕಾಕರಣದ ಪ್ರಾಥಮಿಕ ಹಂತವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ, ಬೂಸ್ಟರ್/ಹೆಚ್ಚುವರಿ ಡೋಸ್‌ಗಳ ಬಗ್ಗೆ ಚಿಂತನೆ ನಡೆಸಲು ಭಾರತದಂಥ ಅಭಿವೃದ್ಧಿಶೀಲ ದೇಶಗಳು ಮುಂದಾಗಿವೆ.