ಬದಲಾಗುತ್ತಿರುವ ಜೀವನಶೈಲಿಯಲ್ಲಿ ನೀವು ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಹಲವಾರು ವರ್ಕೌಟ್ ಗಳನ್ನು ಮಾಡುತ್ತಾರೆ. ಆದರೆ ಆಕರ್ಷಕ ದೇಹದ ಆಕಾರವನ್ನು ಪಡೆಯಲು ಮಹಿಳೆಯರು ಎಷ್ಟು ಸಮಯ ವ್ಯಾಯಾಮ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ತೂಕ ಇಳಿಸಿಕೊಳ್ಳಲು ಹೆಚ್ಚಿನ ಮಹಿಳೆಯರು ವ್ಯಾಯಾಮ ಮಾಡುತ್ತಾರೆ, ಅದಕ್ಕಾಗಿ ನೀವು ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಹಾಗೇ ವಾರಕ್ಕೆ 200-300 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅವಶ್ಯಕ. ಅದಕ್ಕಾಗಿ ನೀವು ವಾಕಿಂಗ್, ರನ್ನಿಂಗ್ ಮಾಡಬಹುದು.
ಯುವತಿಯರು ಸ್ನಾಯುಗಳನ್ನು ಬಲಪಡಿಸಲು ವರ್ಕೌಟ್ ಮಾಡುತ್ತಾರೆ. ಅದಕ್ಕಾಗಿ ನೀವು ವಾರದಲ್ಲಿ 2 ದಿನ ವರ್ಕೌಟ್ ಮಾಡಿದರೆ ಸಾಕು. ಹಾಗೇ 12ರಿಂದ 15 ಬಾರಿ ಸ್ನಾಯುಗಳನ್ನು ದಂಡಿಸುವ ವ್ಯಾಯಾಮ ಮಾಡಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಮಹಿಳೆಯರು ಫಿಟ್ ಆಗಿರಲು ಏರೋಬಿಕ್ ಮಾಡುತ್ತಾರೆ. ಆದರೆ ಇದನ್ನು ವಾರಕ್ಕೆ 75 ರಿಂದ 100 ನಿಮಿಷಗಳ ಕಾಲ ಮಾಡಬೇಕು. ಇದಲ್ಲದೇ ಪ್ರತಿದಿನ 20 ನಿಮಿಷಗಳ ಕಾಲ ಏರೋಬಿಕ್ ವ್ಯಾಯಾಮದಲ್ಲಿ ನೃತ್ಯ, ಈಜು ಅಥವಾ ಸೈಕ್ಲಿಂಗ್ ಮಾಡಬಹುದು.