
ಮನೆಯಲ್ಲಿರುವ ಎಲ್ಲರೂ ಕೋವಿಡ್ ಲಸಿಕೆಗಳನ್ನು ಪಡೆದಿದ್ದಾರೆ ಎಂಬುದನ್ನ ಪತ್ತೆ ಹಚ್ಚಲು ಕ್ಯೂಆರ್ ಕೋಡ್ ಹೊಂದಿರುವ ಲೋಗೋವನ್ನು ಪರಿಚಯ ಮಾಡಲು ಮುಂದಾಗಿದೆ. ಈ ರೀತಿ ವಿನ್ಯಾಸದ ಲೋಗೋವನ್ನು ರಚಿಸುವಂತೆ ರಾಜ್ಯ ಪರಿಸರ ಸಚಿವ ಆದಿತ್ಯ ಠಾಕ್ರೆ ಬಿಎಂಸಿಗೆ ಸೂಚನೆ ನೀಡಿದ್ದಾರೆ. ಮುಂಬೈನಲ್ಲಿ ಕೋವಿಡ್ 19 ಪತ್ತೆಗೆ ಹಾಗೂ ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸುವ ವಿಚಾರವಾಗಿ ನಡೆದ ಸಭೆಯಲ್ಲಿ ಠಾಕ್ರೆ ಈ ಸೂಚನೆಯನ್ನು ನೀಡಿದ್ದಾರೆ.
ಹೇಗೆ ಕೆಲಸ ಮಾಡುತ್ತೆ ಈ ಕ್ಯುಆರ್ ಕೋಡ್..?
ಸಚಿವಾಲಯದಿಂದ ಬಂದಿರುವ ಪ್ರಕಟಣೆಯ ಪ್ರಕಾರ ಈ ಕ್ಯೂಆರ್ ಕೋಡ್ಗಳನ್ನು ಮನೆ ಹಾಗೂ ಕಚೇರಿ ಕಟ್ಟಡಗಳ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗುತ್ತದೆ. ಈ ಕ್ಯೂ ಆರ್ ಕೋಡ್ಗಳು ಮನೆ ಅಥವಾ ಕಟ್ಟಡಗಳಲ್ಲಿ ಇರುವ ಜನರು ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆಯೇ ಎಂದು ಪತ್ತೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.