alex Certify ಬ್ರಿಟಿಷರು ಭಾರತದಿಂದ ಲೂಟಿ ಮಾಡಿದ ಸಂಪತ್ತೆಷ್ಟು ? ದಂಗಾಗಿಸುತ್ತೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟಿಷರು ಭಾರತದಿಂದ ಲೂಟಿ ಮಾಡಿದ ಸಂಪತ್ತೆಷ್ಟು ? ದಂಗಾಗಿಸುತ್ತೆ ವಿವರ

ಭಾರತವನ್ನು ಸುದೀರ್ಘ ಕಾಲ ಅಂದರೆ ಸುಮಾರು 200 ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ಮಾಡಿದ್ದು, ಈ ಸಮಯದಲ್ಲಿ, ಬ್ರಿಟಿಷರು ಭಾರತದ ಸಂಪನ್ಮೂಲಗಳನ್ನು ನಿರಂತರವಾಗಿ ಲೂಟಿ ಮಾಡಿದರು, ಆದರೆ ಈ ಅವಧಿಯಲ್ಲಿ ಬ್ರಿಟಿಷರು ಭಾರತದಿಂದ ಲೂಟಿ ಮಾಡಿದ ಸಂಪತ್ತು ಎಷ್ಟು ಗೊತ್ತಾ ? ಇತಿಹಾಸಕಾರ ಉತ್ಸಾ ಪಟ್ನಾಯಕ್ ಪ್ರಕಾರ, ಬ್ರಿಟಿಷರು 1765 ಮತ್ತು 1938 ರ ನಡುವೆ ಭಾರತದಿಂದ ಸುಮಾರು $ 45 ಟ್ರಿಲಿಯನ್ ಲೂಟಿ ಮಾಡಿದರು..

ಈ ಮೊತ್ತವು ಇಂದಿನ ಬ್ರಿಟನ್‌ನ ವಾರ್ಷಿಕ GDP ಗಿಂತ ಸುಮಾರು 15 ಪಟ್ಟು ಹೆಚ್ಚು. ಭಾರತದ ವಸಾಹತುಶಾಹಿಯಿಂದ ಬ್ರಿಟನ್‌ಗೆ ಯಾವುದೇ ಗಮನಾರ್ಹ ಆರ್ಥಿಕ ಲಾಭವಾಗಲಿಲ್ಲ ಎಂದು ಬ್ರಿಟನ್ ಜನರು ನಂಬುತ್ತಾರಾದರೂ ಸತ್ಯ ಮಾತ್ರ ವಿಭಿನ್ನವಾಗಿದೆ.

ಬ್ರಿಟಿಷರು 1757 ರಿಂದ 1947 ರವರೆಗೆ 190 ವರ್ಷಗಳ ಕಾಲ ಭಾರತವನ್ನು ಆಳಿದ್ದು, ಪ್ಲಾಸಿ ಯುದ್ಧದಲ್ಲಿ ವಿಜಯದ ನಂತರ, ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು. ಇದರ ನಂತರ, 1858 ರಲ್ಲಿ, ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯು ರಾಣಿ ವಿಕ್ಟೋರಿಯಾಗೆ ದಾರಿ ಮಾಡಿಕೊಟ್ಟಿತು.

ಆಗಸ್ಟ್ 15, 1947 ರಂದು ಭಾರತವು ಸ್ವಾತಂತ್ರ್ಯ ಸಾಧಿಸಿದ್ದು, ಬ್ರಿಟಿಷರ ಆಳ್ವಿಕೆಯು ಕೊನೆಗೊಂಡಿತು. ಬ್ರಿಟಿಷರು ಭಾರತವನ್ನು ಆರ್ಥಿಕ ಶೋಷಣೆ, ರಾಜಕೀಯ ದಬ್ಬಾಳಿಕೆ ಮತ್ತು ಸಾಂಸ್ಕೃತಿಕ ಸಾಮ್ರಾಜ್ಯಶಾಹಿಗೆ ಒಳಪಡಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...