ತನ್ನ ಲಕ್ಷಾಂತರ ಚಂದಾದಾರರಿಗೆ ಅನುಕೂಲವಾಗುವ ಕ್ರಮವೊಂದನ್ನು ತೆಗೆದುಕೊಂಡಿರುವ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಓ), ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂದು ನೋಡಿಕೊಳ್ಳಲು ಸರಳವಾದ ಅನುಕೂಲವೊಂದನ್ನು ಮಾಡಿಕೊಟ್ಟಿದೆ.
ಪಿಂಚಣಿ ಖಾತೆಯಲ್ಲಿ ದುಡ್ಡು ಎಷ್ಟಿದೆ ಎಂದು ಅರಿಯಲು ನಾಲ್ಕು ವಿವಿಧ ರೀತಿಗಳಲ್ಲಿ ಪ್ರಯತ್ನಿಸಬಹುದಾಗಿದೆ. ಉಮಾಂಗ್ ಅಪ್ಲಿಕೇಶನ್, ಎಸ್‌ಎಂಎಸ್ ಹಾಗೂ ಮಿಸ್ಡ್ ಕರೆ ಮೂಲಕ ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಪರೀಕ್ಷಿಸಬಹುದಾಗಿದೆ.
ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಪೋರ್ಟಲ್‌ನಲ್ಲಿ ನೋಂದಾಯಿತರಾದ ಸದಸ್ಯರು ತಮ್ಮ ಪಿಎಫ್ ವಿವರಗಳನ್ನು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ‘EPFOHO UAN’ ಎಂದು ಟೈಪ್ ಮಾಡಿ 7738299899ಗೆ ಕಳುಹಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇದರೊಂದಿಗೆ ತಮ್ಮ ಮೊಬೈಲ್ ಸಂಖ್ಯೆಗಳಿಂದ 011-22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಇಪಿಎಫ್‌ಓ ಚಂದಾದಾರರು ತಮ್ಮ ಪಿಎಫ್ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.