ಹೆಚ್ಚಾಗಿ ಮಹಿಳೆಯರನ್ನು ಕಾಡುವ ಥೈರಾಯ್ಡ್ ಸಮಸ್ಯೆಯ ಮುಖ್ಯ ಲಕ್ಷಣಗಳು ಎಂದರೆ ದೇಹತೂಕ ವಿಪರೀತ ಹೆಚ್ಚುವುದು ಅಥವಾ ಕಡಿಮೆಯಾಗುವುದು. ವಿನಾಕಾರಣ ಸುಸ್ತು, ಭೇದಿ ಇಲ್ಲವೇ ಅನಿಯಮಿತ ಮುಟ್ಟಿನ ಅವಧಿ.
ಮಹಿಳೆಯರು ಪ್ರತಿ ಐದು ವರ್ಷಕ್ಕೊಮ್ಮೆ ಥೈರಾಯ್ಡ್ ಪರೀಕ್ಷೆ ಮಾಡಿಕೊಳ್ಳುವುದು ಬಹಳ ಒಳ್ಳೆಯದು. ಈ ಸಮಸ್ಯೆ ಇರುವವರು ಎಲೆಕೋಸು ಹಾಗೂ ಹೂಕೋಸು ತಿನ್ನಬಾರದು ಎನ್ನುತ್ತಾರೆ. ಇದು ತಪ್ಪು. ದೇಹಕ್ಕೆ ಎಲ್ಲಾ ರೀತಿಯ ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ. ಇದರ ಕುರಿತಾದ ಮೂಢನಂಬಿಕೆಗಳನ್ನು ಬಿಟ್ಟು ಸಾಕಷ್ಟು ಪ್ರಮಾಣದ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು.
ತರಕಾರಿಗಳನ್ನು ಹಸಿಯಾಗಿ ಸೇವಿಸುವ ಮೂಲಕ ಹಾಗೂ ಹಣ್ಣುಗಳ ಜ್ಯೂಸ್ ತಯಾರಿಸಿ ದಿನಕ್ಕೊಂದು ಲೋಟದಷ್ಟು ಕುಡಿಯುವ ಮೂಲಕ ನೀವು ಶಕ್ತಿಯನ್ನು ಮರಳಿ ಪಡೆಯಬಹುದು. ಥೈರಾಯ್ಡ್ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಅವರು ನೀಡಿದ ಔಷಧದ ಜೊತೆಗೆ ಕಟ್ಟುನಿಟ್ಟಾದ ಪಥ್ಯ ಅನುಸರಿಸಿದರೆ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.