ಶಾಶ್ವತ ಖಾತೆ ಸಂಖ್ಯೆ (ಪಾನ್) ಎಂದರೆ ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುವ ಹತ್ತು ಅಕ್ಷರಾಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಲ್ಯಾಮಿನೇಟ್ ಮಾಡಲಾದ ಈ ಪ್ಲಾಸ್ಟಿಕ್ ಕಾರ್ಡ್ ಬಹಳ ಮುಖ್ಯವಾದ ದಾಖಲೆ.
ಆದರೆ ಈ 10 ಅಕ್ಷರ ಮತ್ತು ಅಂಕಿಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಮಹತ್ವವಿದೆ ಎಂದು ಬಹುತೇಕರಿಗೆ ಅರಿವಿಲ್ಲ.
ಪಾನ್ ಎಂದರೆ ಸಾಮಾನ್ಯವಾಗಿ ನಿಮ್ಮ ಬಗೆಗಿನ ಮಾಹಿತಿ ವಿವರವಾಗಿದೆ. ಉದಾಹರಣೆಗೆ: “BFDPS8169K” ಎಂಬುದು ನಿಮ್ಮ ಪಾನ್ ಸಂಖ್ಯೆಯಾಗಿದ್ದರೆ, ಮೊದಲ ಮೂರು ಅಕ್ಷರಗಳಾದ BFD, ಆಂಗ್ಲ ವರ್ಣಮಾಲೆಯ A-Zವರೆಗಿನ ಅಕ್ಷರವಾಗಿರುತ್ತವೆ.
ಪಾನ್ನಲ್ಲಿರುವ ನಾಲ್ಕನೇ ಅಕ್ಷರವು, ಪಾನ್ ಹೊಂದಿರುವಾತನ ಸ್ಥಿತಿಯನ್ನು ತಿಳಿಸುತ್ತದೆ. P ಎಂದರೆ ವೈಯಕ್ತಿಕ ಎಂದರ್ಥ. ಅಂದರೆ ನೀವು ವೈಯಕ್ತಿಕ ಪಾನ್ದಾರರಾದರೆ ನಿಮ್ಮ ಪಾನ್ ಅಕ್ಷರಾಂಕದ ನಾಲ್ಕನೇ ಅಕ್ಷರವು P ಎಂದು ಇರುತ್ತದೆ. ಇದೇ ವೇಳೆ F & Cಗಳು ಸಂಸ್ಥೆಯನ್ನು ಸೂಚಿಸುತ್ತವೆ. H ಎಂದರೆ ಅವಿಭಜಿತ ಕುಟುಂಬದ ಸೂಚಕ. A ವ್ಯಕ್ತಿಗಳನ್ನು ಸೂಚಿಸಿದರೆ, T ಟ್ರಸ್ಟ್ನ ಸಂಕೇತ. B ಎಂದರೆ ವ್ಯಕ್ತಿಗಳ ಒಂದು ಗುಂಪು. L ಎಂದರೆ ಸ್ಥಳೀಯ ಪ್ರಾಧಿಕಾರ, G ಎಂದರೆ ಸರ್ಕಾರಕ್ಕೆ ಸಂಬಂಧಿಸಿದ್ದು.
ಐದನೇ ಅಕ್ಷರವು ಕಾರ್ಡ್ದಾರನ ಹೆಸರಿನ ಮೊದಲ ಅಕ್ಷರ ಸೂಚಿಸುತ್ತದೆ.
ಮುಂದಿನ ನಾಲ್ಕು ಅಂಕಿಗಳಲ್ಲಿ ಬರುವ ಸಂಖ್ಯೆಗಳು 0001ರಿಂದ 9999ರ ವರೆಗೂ ಚಾಲ್ತಿಯಲ್ಲಿರುವ ಸರಣಿ ಸಂಖ್ಯೆಗಳಾಗುತ್ತವೆ.
ಕೊನೆಯ ಅಕ್ಷರವು ಮೊದಲ ಒಂಬತ್ತು ಅಕ್ಷರಾಂಕಗಳನ್ನು ಗಣನೆಗೆ ತೆಗೆದುಕೊಂಡು ರಚಿಸಲಾದ ಅಕ್ಷರವಾಗಿದೆ.