ರಾತ್ರಿ ತಡವಾಗಿ ಮಲಗುವುದ್ರಿಂದ ಅಥವಾ ರಾತ್ರಿ ಬೇರೆ ಕೆಲಸ ಮಾಡುವುದ್ರಿಂದ ಬೆಳಿಗ್ಗೆ ನಿದ್ರೆ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಕೆಲಸದಿಂದಾಗಿ ಮಧ್ಯಾಹ್ನ ನಿದ್ರೆ ಬರುತ್ತದೆ. ಬೆಳಗಿನ ಕೆಲಸ ಮುಗಿಸಿ ಸುಸ್ತು ಕಡಿಮೆ ಮಾಡಿಕೊಳ್ಳಲು ಅನೇಕ ಮಹಿಳೆಯರು ಮಧ್ಯಾಹ್ನ ನಿದ್ರೆ ಮಾಡುತ್ತಾರೆ. ಮಧ್ಯಾಹ್ನ ಮಲಗುವುದು ಎಷ್ಟು ಪ್ರಯೋಜನಕಾರಿ, ಹಾಗೆ ಎಷ್ಟು ಸಮಯ ನಿದ್ರೆ ಮಾಡಬೇಕೆಂಬುದು ತಿಳಿದಿರಬೇಕು.
ಮಧ್ಯಾಹ್ನ ಮಲಗುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಇದಕ್ಕೆ ಇಂಗ್ಲೀಷ್ ನಲ್ಲಿ ನಾಪಿಂಗ್ ಎಂದೂ ಕರೆಯುತ್ತಾರೆ. ಮಧ್ಯಾಹ್ನ ಮಲಗುವುದ್ರಿಂದ ವಿಶ್ರಾಂತಿ ಸಿಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ. ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೆನಪಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಜಾಗರೂಕರಾಗಿರುತ್ತೇವೆ. ಆಯಾಸ ಕಡಿಮೆಯಾಗುತ್ತದೆ.
ಮಧ್ಯಾಹ್ನದ ನಿದ್ರೆಯಿಂದ ಕೆಲವು ನಷ್ಟವೂ ಇದೆ. ಇದು ಜಡತ್ವವನ್ನು ಹೆಚ್ಚಿಸುತ್ತದೆ. ಅರೆ ನಿದ್ರೆ ಸಮಸ್ಯೆ ಕಾಡುತ್ತದೆ. ಇದ್ರಿಂದ ಆಲೋಚನೆ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹಗಲಿನ ನಿದ್ರೆ ರಾತ್ರಿ ನಿದ್ರೆಗೆ ಅಡ್ಡಿ ಮಾಡುತ್ತದೆ. ನಿದ್ರಾಹೀನತೆ ಸಮಸ್ಯೆ ಹೆಚ್ಚಾಗುತ್ತದೆ.
ಅಧ್ಯಯನ ಪ್ರಕಾರ, ಮಧ್ಯಾಹ್ನ 30 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಕಾಲ ನಿದ್ರೆ ಮಾಡುವುದು ಪ್ರಯೋಜನಕಾರಿ. ಇದಕ್ಕಿಂತ ಹೆಚ್ಚು ಸಮಯ ನಿದ್ರೆ ಮಾಡಿದ್ರೆ ದೇಹಕ್ಕೆ ಹಾನಿಯಾಗುತ್ತದೆ. ಮಧ್ಯಾಹ್ನ 3 ಗಂಟೆಯ ನಂತರ ಮಲಗಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಮಧ್ಯಾಹ್ನ 30 ನಿಮಿಷ ಉತ್ತಮ ನಿದ್ರೆ ಬಯಸುವವರು ಶಾಂತವಾದ ಪ್ರದೇಶದಲ್ಲಿ ಮಲಗಬೇಕು.