alex Certify ಒಂದು ನಿಮಿಷದಲ್ಲಿ ಹೆಲಿಕಾಪ್ಟರ್‌ನಿಂದ ಹೆಚ್ಚು ಪುಲ್-ಅಪ್‌ ಮಾಡಿ ದಾಖಲೆ ಮಾಡಿದ ಸಾಹಸಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ನಿಮಿಷದಲ್ಲಿ ಹೆಲಿಕಾಪ್ಟರ್‌ನಿಂದ ಹೆಚ್ಚು ಪುಲ್-ಅಪ್‌ ಮಾಡಿ ದಾಖಲೆ ಮಾಡಿದ ಸಾಹಸಿಗ

ಪುಲ್-ಅಪ್‌ಗಳನ್ನು ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅರ್ಮೇನಿಯಾದ ಹಮಾಜಾಸ್ಪ್ ಹ್ಲೋಯಾನ್‌ ಅವರು ಇದನ್ನು ಸಾಧಿಸಿ ತೋರಿಸಿ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಅವರು ಮಾಡಿರುವುದು ಏನೆಂದರೆ, ಒಂದು ನಿಮಿಷದಲ್ಲಿ ಹೆಲಿಕಾಪ್ಟರ್‌ನಿಂದ ಹೆಚ್ಚು ಪುಲ್-ಅಪ್‌ ಮಾಡಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಹೆಲಿಕಾಪ್ಟರ್ ನೆಲದಿಂದ ಕೆಲವು ಅಡಿಗಳಷ್ಟು ಮೇಲಕ್ಕೆ ತೂಗಾಡುತ್ತಿರುವುದನ್ನು ನೋಡಬಹುದು. ಅದೇ ವೇಳೆ ಹಮಾಜಾಸ್ಪ್ ಹ್ಲೋಯಾನ್ ಚಾಪರ್‌ನಿಂದ ತೂಗಾಡುತ್ತಿರುವುದನ್ನೂ ನೋಡಬಹುದು.

ನಂತರ ಅವರು ಒಂದು ನಿಮಿಷದಲ್ಲಿ 32 ಪುಲ್-ಅಪ್‌ಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಅಧಿಕೃತ ವೆಬ್‌ಸೈಟ್ ಪ್ರಕಾರ, ಕಳೆದ ವರ್ಷ ನವೆಂಬರ್‌ನಲ್ಲಿ ಅರ್ಮೇನಿಯಾದ ರಾಜಧಾನಿ ಯೆರೆವಾನ್‌ನಲ್ಲಿ ಈ ದಾಖಲೆಯನ್ನು ರಚಿಸಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಹ್ಲೋಯಾನ್ ಅವರ ತ್ರಾಣ ಮತ್ತು ಶಕ್ತಿಯನ್ನು ನೋಡಿ ಜನರು ರೋಮಾಂಚನಗೊಂಡಿದ್ದಾರೆ.

https://www.youtube.com/watch?v=YJVg1b7VMM4

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...