ಮೊಬೈಲ್ ಕಳ್ಳತನವಾದ್ರೆ ಅಥವಾ ಸಿಮ್ ಗೆ ಹಾನಿಯಾದ್ರೆ ಮತ್ತೊಂದು ಸಿಮ್ ಪಡೆಯಬೇಕಾಗುತ್ತದೆ. ಹಿಂದೆ ಈ ಸಿಮ್ ಪಡೆಯಲು 2-4 ದಿನ ಬೇಕಾಗಿತ್ತು. ಆದ್ರೀಗ ಸಿಮ್ ಖರೀದಿಗೆ ತುಂಬಾ ಸಮಯ ಕಾಯಬೇಕಾಗಿಲ್ಲ. ಸಿಮ್ ಕೆಲವೇ ಗಂಟೆಯಲ್ಲಿ ಸಕ್ರಿಯಗೊಳ್ಳುತ್ತದೆ. ಆಧಾರ್ ಕಾರ್ಡ್ ನೆರವಿನಿಂದ ನೀವು ಬೇಗ ಸಿಮ್ ಪಡೆಯಬಹುದು. ಒಂದು ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಪಡೆಯಬಹುದು ಎಂಬುದು ನಿಮಗೆ ಗೊತ್ತಾ..?
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಪ್ರಕಾರ, ಒಂದು ಆಧಾರ್ ಕಾರ್ಡ್‌ನಿಂದ 18 ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು. ಈ ಹಿಂದೆ ಟ್ರಾಯ್ ನಿಯಮದ ಪ್ರಕಾರ ಒಂಬತ್ತು ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದಿತ್ತು. ಈಗ ಈ ಮಿತಿಯನ್ನು ದ್ವಿಗುಣಗೊಳಿಸಲಾಗಿದೆ. ವ್ಯಾಪಾರ ಅಥವಾ ಜನರ ಇತರ ಅಗತ್ಯಗಳಿಗಾಗಿ ಹೆಚ್ಚಿಸಲಾಗಿದೆ.
ಆಧಾರ್ ಕಾರ್ಡ್ ಜೊತೆ ಎಷ್ಟು ಸಿಮ್ ಲಿಂಕ್ ಆಗಿದೆ ಎಂಬುದನ್ನು ನೋಡಬಹುದು. ಇದಕ್ಕೆ ನಿಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಗೆ ಲಿಂಕ್ ಆಗಿರಬೇಕಾಗುತ್ತದೆ. ಅದಕ್ಕಾಗಿ ನೀವು ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ಆಧಾರ್ ಗೆ ಲಿಂಕ್ ಮಾಡಬೇಕು.