ಈ ದೃಷ್ಟಿ ಭ್ರಮಣೆಯ ಚಿತ್ರಗಳು ಕಣ್ಣಿಗೆ ಭಾರೀ ಸವಾಲೊಡ್ಡುತ್ತವೆ. ’20 ನಿಮಿಷಗಳ ಅವಧಿಯಲ್ಲಿ ಸುಮಾರು 1,400 ಕ್ಲಿಕ್‌ಗಳ’ ಬಳಿಕ ಸೆರೆ ಹಿಡಿಯಲಾದ ವನ್ಯಜೀವಿ ಛಾಯಾಚಿತ್ರವೊಂದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ ನಂದಾ ಹಂಚಿಕೊಂಡಿದ್ದಾರೆ.
ತಾವು ಶೇರ್ ಮಾಡಿರುವ ಚಿತ್ರದಲ್ಲಿ ಎಷ್ಟು ಆನೆಗಳಿವೆ ಎಂದು ಗೆಸ್ ಮಾಡಲು ಚಾಲೆಂಚ್ ಮಾಡಿದ್ದಾರೆ ನಂದಾ. ನೋಡಲು ಸರಳವಾಗಿ ಕಾಣುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಿಮ್ಮ ತಲೆಗೆ ಭಾರೀ ಕೆಲಸ ಬೀಳುತ್ತೆ.
ಸುಂದರವಾಗಿ ಕಾಣಲು ಮನೆಯಲ್ಲಿಯೇ ಮಾಡಿ ʼಫೇಶಿಯಲ್ʼ
“ಏಳು ಆನೆಗಳು ತಮ್ಮ ದಾಹ ನೀಗಿಸಿಕೊಳ್ಳುತ್ತಿರುವ ಈ ಪರಿಪೂರ್ಣ ಚಿತ್ರ ಸೆರೆ ಹಿಡಿಯಲು ವೈಲ್ಡ್‌ಲೆನ್ಸ್ ಈಕೋ ಪ್ರತಿಷ್ಠಾನಕ್ಕೆ 20 ನಿಮಿಷಗಳ ಅವಧಿಯಲ್ಲಿ ಸುಮಾರು 1,400 ಕ್ಲಿಕ್‌ಗಳು ಬೇಕಾದವು. ಇದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಕೆಲವರಿಗೆ ಮಾತ್ರವೇ ಗೊತ್ತಾಗಿದೆ,” ಎಂದು ನಂದಾ ಚಿತ್ರದ ವಿವರವನ್ನು ಹಂಚಿಕೊಂಡಿದ್ದಾರೆ.
ವೈಲ್ಡ್‌ಲೆನ್ಸ್ ಇಕೋ ಪ್ರತಿಷ್ಠಾನ ಎಂಬ ಎನ್‌ಜಿಓದ ಸದಸ್ಯರೊಬ್ಬರು ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ.