alex Certify ಪ್ರತಿದಿನ ಎಷ್ಟು ಮೊಟ್ಟೆ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಎಷ್ಟು ಮೊಟ್ಟೆ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು…?

ಮೊಟ್ಟೆಗಳು ಮಾನವನ ದೇಹಕ್ಕೆ ಪೋಷಕಾಂಶಗಳನ್ನ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತವೆ.

ತೂಕ ಇಳಿಸುವ ಪ್ರಯತ್ನದಲ್ಲಿ ನೀವಿದ್ದರೆ ಮೊಟ್ಟೆಯನ್ನ ನಿಮ್ಮ ಡಯಟ್​ ಚಾರ್ಟ್​ನಲ್ಲಿ ಸೇರಿಸಿಕೊಳ್ಳಬಹುದು ಅಂತಾ ಅನೇಕರು ಹೇಳುತ್ತಾರೆ.

ಅಗಾಧವಾದ ಪ್ರೋಟಿನ್​ ಹೊಂದಿರುವ ಮೊಟ್ಟೆಯ ಸೇವನೆಯಿಂದ ಬಹಳ ಸಮಯದ ಕಾಲ ಏನನ್ನೂ ತಿನ್ನದೇ ಇರಬಹುದಾಗಿದೆ. ಅನೇಕರು ಮೊಟ್ಟೆಯನ್ನ ಉಪಹಾರಕ್ಕೆ ಬಳಕೆ ಮಾಡಿದರೆ ಇನ್ನು ಕೆಲವರು ಸಂಜೆಯ ತಿನಿಸಾಗಿ ತಿನ್ನುತ್ತಾರೆ. ಮೊಟ್ಟೆಯಿಂದ ನಿಮ್ಮ ದೇಹಕ್ಕೆ ತುಂಬಾ ಉಪಯೋಗ ಇದ್ದರೂ ಸಹ ಅತಿಯಾದ ಮೊಟ್ಟೆ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲುದು.

ಡಯಟೀಷಿಯನ್​ಗಳು ಹೇಳುವಂತೆ, ಮೊಟ್ಟೆ ಒಂದು ಅದ್ಭುತ ಆಹಾರ ಪದಾರ್ಥ. ಒಂದು ಮೊಟ್ಟೆ 200ಗ್ರಾಂ ಕೊಲೆಸ್ಟ್ರಾಲ್​ನ್ನ ಹೊಂದಿರುತ್ತೆ. ಆದರೆ ಈ ಮೊಟ್ಟೆಯಲ್ಲಿ ಇತರೆ ಪೋಷಕಾಂಶಗಳೂ ಇರೋದ್ರಿಂದ ಹೃದಯಾಘಾತದ ಅಪಾಯವನ್ನ ಕಡಿಮೆ ಮಾಡಬಲ್ಲವು. ನಿಮ್ಮ ನಿತ್ಯದ ಆಹಾರದಲ್ಲಿ ಮೊಟ್ಟೆ ಸೇವನೆ ಮಾಡೋದ್ರಿಂದ ದೇಹಕ್ಕೆ ಪ್ರೋಟಿನ್​, ಕೊಲೈನ್​, ವಿಟಾಮಿನ್​ ಎ ಹಾಗೂ ಡಿ ಸಿಗಲಿದೆ.

ಉತ್ತಮ ಆಹಾರ ಕ್ರಮವನ್ನ ಪಾಲಿಸಲು ಇಚ್ಚಿಸುವವರು ದಿನಕ್ಕೆ 1 ಅಥವಾ 2 ಮೊಟ್ಟೆಯನ್ನ ತಿನ್ನಬಹುದು. ಇದಕ್ಕಿಂತ ಹೆಚ್ಚಿಗೆ ಮೊಟ್ಟೆಯನ್ನ ಸೇವಿಸಿದರೆ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...