
ಘಟನೆ ಬುಧವಾರ ಮಧ್ಯಾಹ್ನ ನಿಮುಚ್ ನ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಎನ್ ಎಸ್ ಯು ಐ ಅಧ್ಯಕ್ಷ ಕುಲದೀಪ್ ವರ್ಮಾ ಎಂಬಾತ 19 ವರ್ಷದ ತನ್ನ ಗೆಳತಿಯನ್ನು ಅಡ್ಡಗಟ್ಟಿ ಆಕೆಯೊಂದಿಗೆ ವಾಗ್ವಾದದಲ್ಲಿ ತೊಡಗಿದ್ದಾನೆ. ಇಬ್ಬರ ನಡುವಿನ ಮಾತುಕತೆ ಬಿರುಸುಗೊಂಡಿದ್ದು, ಅಂತಿಮವಾಗಿ ಆಕೆಗೆ ಚಾಕುವಿನಿಂದ ಇರಿಯಲು ಆರಂಭಿಸಿದ್ದಾನೆ.
ದಾರಿಹೋಕರು ಇದನ್ನು ನೋಡುತ್ತಾ ನಿಂತಿದ್ದು, ಅವರೆಡೆಗೆ ತಿರುಗಿದ ಕುಲದೀಪ್, ಈಕೆ ನನಗೆ ಮೋಸ ಮಾಡಿದ್ದಾಳೆ. ನನ್ನನ್ನು ಹೊರತುಪಡಿಸಿ ಇನ್ನೂ ಹಲವರು ಈಕೆಯ ಗೆಳೆಯರಾಗಿದ್ದಾರೆ ಎಂದು ಆರೋಪಿಸಿ ಮತ್ತೆ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಯುವತಿಯನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಪೋಷಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.