ಹೆರಿಗೆ ನಂತ್ರ ಮಹಿಳೆಯರಿಗೆ ಅವಶ್ಯವಾಗಿ ವಿಶ್ರಾಂತಿ ಬೇಕು. ಶಾರೀರಿಕ ಹಾಗೂ ಮಾನಸಿಕವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಈ ಮಧ್ಯೆ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ ಎಂಬುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಪ್ರಶ್ನೆ. ಈ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ.
ತಜ್ಞರ ಪ್ರಕಾರ ಹೆರಿಗೆ ನಂತ್ರ 4-6 ತಿಂಗಳವರೆಗೆ ಮಹಿಳೆ ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದಕ್ಕಿಂತ ಮೊದಲು ಸಂಬಂಧ ಬೆಳೆಸಿದಲ್ಲಿ ಮಹಿಳೆ ಮತ್ತೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಮಹಿಳೆ ಮತ್ತೆ ಗರ್ಭಿಣಿಯಾದಲ್ಲಿ ಅದು ಆಕೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಹೆರಿಗೆ ನಂತ್ರ 4-6 ತಿಂಗಳು ಶಾರೀರಿಕ ಸಂಬಂಧ ಬೆಳೆಸದೆ ವಿಶ್ರಾಂತಿ ಪಡೆಯುವುದು ಸೂಕ್ತವೆಂದು ತಜ್ಞರು ಹೇಳಿದ್ದಾರೆ.
ಹೆರಿಗೆ ನಂತ್ರ ವಿಶ್ರಾಂತಿ ಪಡೆಯದೆ ಮಹಿಳೆ ಸಂಬಂಧ ಬೆಳೆಸಿದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತದೆ. ಕೆಲ ಮಹಿಳೆಯರಿಗೆ ಹೆರಿಗೆ ನಂತ್ರ ರಕ್ತಸ್ರಾವ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರಕ್ತಸ್ರಾವ ಸಂಪೂರ್ಣವಾಗಿ ನಿಲ್ಲುವವರೆಗೂ ಸಂಬಂಧ ಬೆಳೆಸಬಾರದು. ಹೊಲಿಗೆ ನೋವು ಸಾಮಾನ್ಯವಾಗಿ ಮಹಿಳೆಯನ್ನು ಕಾಡುತ್ತದೆ. ವಿಶ್ರಾಂತಿ ಪಡೆಯದೆ ಸಂಬಂಧ ಬೆಳೆಸಿದ್ರೆ ಹೊಲಿಗೆ ಬಿಚ್ಚುವ ಅಪಾಯವಿರುತ್ತದೆ.
ಹೆರಿಗೆ ನಂತ್ರ ಗರ್ಭಕಂಠ ದೊಡ್ಡದಾಗುತ್ತದೆ. ಈ ವೇಳೆ ಸಂಬಂಧ ಬೆಳೆಸಿದ್ರೆ ಸಾಂಕ್ರಾಮಿಕ ರೋಗ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮೂತ್ರದ ಸೋಂಕು ಕಾಣಿಸಿಕೊಳ್ಳಬಹುದು.