ನನಗೆ ಒಮ್ಮೆ ಕೋವಿಡ್ ಬಂದು ಹೋಗಿತ್ತು, ನಾನು ಕೋವಿಡ್ ಲಸಿಕೆ ಪಡೆದಿದ್ದೇನೆ ಎನ್ನುವವರಲ್ಲಿ ತಮ್ಮಲ್ಲಿ ಕೋವಿಡ್‌ನಿಂದ ಬಚಾವಾಗಲು ಇಮ್ಯೂನಿಟಿ ಎಷ್ಟು ದಿನಗಳ ಕಾಲ ಇರಲಿದೆ ಎಂಬ ಸಂಶಯ ಇದ್ದೇ ಇದೆ. ಮತ್ತೆ ಕೋವಿಡ್ ಬರಬಹುದೇ ಎಂಬ ಆತಂಕವೂ ಇದೆ.
ಕೊರೋನ ವೈರಸ್‌ನಿಂದ ಪಾರಾಗಿ ಬಂದಿರುವುದು, ವ್ಯಾಕ್ಸಿನೇಷನ್ ಮೂಲಕ ಭವಿಷ್ಯದಲ್ಲಿ ಸೋಂಕುಗಳಿಂದ ನೀವು ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದ್ದೀರಿ ಎಂದು ಅರ್ಥವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬದಲಿಗೆ, ಕೊರೋನ ವೈರಸ್ ತನ್ನ ನಿಕಟ ಸಂಬಂಧಿ, ಸೋದರ ಹಾಗೂ ಸಂಬಂಧಿಗಳಂತೆ ವರ್ತಿಸಲು ವಿಕಸನಗೊಳ್ಳುತ್ತಿದೆ. ಇದು ಸಾಮಾನ್ಯ ಶೀತ ಉಂಟುಮಾಡುತ್ತದೆ ಮತ್ತು ಜೀವನದುದ್ದಕ್ಕೂ ಜನರಿಗೆ ಪದೇ ಪದೇ ಸೋಂಕು ತರುತ್ತದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬರೂ ಅನೇಕ ಬಾರಿ ಈ ಸೋಂಕು ಪಡೆಯುವುದು ಅನಿವಾರ್ಯವಾಗಿ ಪರಿಣಮಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ. ಅಮೇಶ್ ಅಡಾಲ್ಜಾ ಅಭಿಪ್ರಾಯಪಟ್ಟಿದ್ದಾರೆ.
ಇತರ ಸಾಮಾನ್ಯ ಶೀತ ವೈರಸ್‌ಗಳಂತೆ ಕೊರೋನ ವೈರಸ್ ಎಷ್ಟು ಸಮಯ ಇರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಹಾಗಿದ್ದರೆ ಮರುಸೋಂಕಿನಿಂದಲೂ ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು? ರೋಗನಿರೋಧಕ ಶಕ್ತಿ ಎಷ್ಟು ಕಾಲ ಇರುತ್ತದೆ? ಎಂಬುದಕ್ಕೆ ತಜ್ಞರು ಉತ್ತರ ನೀಡಿದ್ದಾರೆ.
ಡೆಲ್ಟಾ ಅಥವಾ ಹಿಂದಿನ ಕೊರೋನ ವೈರಸ್ ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದವರಲ್ಲಿ ಮರುಸೋಂಕು ತಡೆಗಟ್ಟುವಲ್ಲಿ ಸುಮಾರು 90% ಪರಿಣಾಮಕಾರಿ ಎಂದು ಅಂದಾಜಿಸಿದೆ. ಆದರೆ ಓಮಿಕ್ರಾನ್ ನಿಜವಾಗಿಯೂ ಆ ಅಂದಾಜನ್ನು ಬದಲಾಯಿಸಿತು ಎಂದು ಸಾಂಕ್ರಾಮಿಕ ರೋಗ ಸಂಶೋಧಕರಾದ ಅಬು ರದ್ದಾದ್ ಹೇಳಿದ್ದಾರೆ.
ಓಮಿಕ್ರಾನ್ ಹೊರಹೊಮ್ಮಿದ ನಂತರ, ಮೊದಲಿನ ಸೋಂಕುಗಳು ಮರುಸೋಂಕಿನ ವಿರುದ್ಧ ಕೇವಲ ಶೇ.50 ರಕ್ಷಣೆ ಒದಗಿಸಿದವು. ಅಂದರೆ ಹಳೆಯ, ಓಮಿಕ್ರಾನ್ ಅಲ್ಲದ ರೂಪಾಂತರದಿಂದ ಚೇತರಿಸಿಕೊಂಡ ನಂತರ ನೀವು ಓಮಿಕ್ರಾನ್ ಬಲೆಗೆ ಬೀಳಬಹುದು. ಅದರ ವಿಭಿನ್ನ ರೂಪಾಂತರದ ನಂತರ ನೀವು ಹೊಸ ಓಮಿಕ್ರಾನ್ ನಿಂದ ಅನಾರೋಗ್ಯಕ್ಕೆ ಒಳಗಾಗಬಹುದು.
ವೈರಸ್ ಈಗ ಹೆಚ್ಚು ಜನರಿಗೆ ತಗುಲುತ್ತಿರುವ ಕಾರಣ, ನೀವು ಮರುಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದು ಅಬು-ರದ್ದಾದ್ ಹೇಳಿದ್ದಾರೆ. ಜತೆಗೆ ವಿವಿಧ ಅಧ್ಯಯನ ವರದಿಯನ್ನು ಆಧರಿಸಿ ಸಮಾಧಾನ ತರುವ ಮತ್ತು ಎಚ್ಚರಿಕೆಯ ಅಭಿಪ್ರಾಯ ನೀಡಿದ್ದಾರೆ.