alex Certify ಕೋವಿಡ್ ಬೂಸ್ಟರ್ ಲಸಿಕೆ ಎಷ್ಟು ದಿನಗಳ ಕಾಲ ರಕ್ಷಣೆ ನೀಡುತ್ತದೆ…? ಅಮೆರಿಕಾ ತಜ್ಞರ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಬೂಸ್ಟರ್ ಲಸಿಕೆ ಎಷ್ಟು ದಿನಗಳ ಕಾಲ ರಕ್ಷಣೆ ನೀಡುತ್ತದೆ…? ಅಮೆರಿಕಾ ತಜ್ಞರ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಫಿಜರ್ ಮತ್ತು ಮಾಡೆರ್ನಾ ಎಮ್‌ಆರ್‌ಎನ್‌ಎ ಲಸಿಕೆಗಳ ಮೂರನೇ ಡೋಸ್‌ಗಳ ಪರಿಣಾಮ, ಲಸಿಕೆ ತೆಗೆದುಕೊಂಡ ನಂತರ ನಾಲ್ಕನೇ ತಿಂಗಳಿಗೆ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಯುಎಸ್ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ತಿಳಿಸಿದೆ.

ಎರಡು ಡೋಸ್‌ಗಳ ನಂತರ ಲಸಿಕೆ ಪರಿಣಾಮಕಾರಿತ್ವವು ಕಡಿಮೆಯಾಗುತ್ತದೆ ಎಂದು ಈಗ ಉತ್ತಮವಾಗಿ ದಾಖಲಿಸಲಾಗಿದೆಯಾದರೂ, ಬೂಸ್ಟರ್‌ ಡೋಸ್ ಎಷ್ಟು ಅವಧಿಯ ಕಾಲ ರಕ್ಷಣೆ ನೀಡುತ್ತದೆ ಎಂಬುದರ ಬಗ್ಗೆ ಹೆಚ್ಚಿನ ದಾಖಲೆಗಳಿಲ್ಲ.

ಹೊಸ ಅಧ್ಯಯನವು ತುರ್ತು ವಿಭಾಗ ಅಥವಾ ತುರ್ತು ಚಿಕಿತ್ಸಾ ಕ್ಲಿನಿಕ್‌ಗೆ 241,204 ಕ್ಕೂ ಹೆಚ್ಚು ಭೇಟಿಗಳು ಹಾಗೂ 93,408 ಆಸ್ಪತ್ರೆಗೆ ದಾಖಲಾತಿಗಳನ್ನು ಆಧರಿಸಿದೆ. ಆಗಸ್ಟ್ 26, 2021 ರಿಂದ ಜನವರಿ 22, 2022 ರ ಅವಧಿಯಲ್ಲಿ ಕೋವಿಡ್-19 ತರಹದ ಅನಾರೋಗ್ಯದ ಪರಿಣಾಮ ವಯಸ್ಕರಲ್ಲಿ ಹೆಚ್ಚು ಗಂಭೀರವಾಗಿದೆ ಎಂದು ವರದಿಯಾಗಿದೆ.

ನೋಡುಗರ ಎದೆ ನಡುಗಿಸುತ್ತೆ ತನ್ನ ಪ್ರಾಣ ಒತ್ತೆ ಇಟ್ಟು ಪುಟ್ಟ ಹುಡುಗಿಯ ರಕ್ಷಣೆ ಮಾಡಿದ ವ್ಯಕ್ತಿ ವಿಡಿಯೋ

ಲಸಿಕೆ ಪಡೆದ ಮತ್ತು ಲಸಿಕೆ ಪಡೆಯದ, ಕೊರೋನಾ ವೈರಸ್ ರೋಗಿಗಳ ನಡುವಿನ ಗುಣಲಕ್ಷಣಗಳನ್ನು ಹೋಲಿಸಿ, ವಯಸ್ಸು, ಅವರು ವಾಸಿಸುತ್ತಿದ್ದ ಪ್ರದೇಶ, ಅವರಲ್ಲಿ ಎಷ್ಟು ದಿನ ರೋಗವಿತ್ತು, ಅವರಲ್ಲಿ ಮೊದಲೇ ಇದ್ದ ಕಾಯಿಲೆಗಳನ್ನು ಗಣನೆಗೆ ತೆಗೆದುಕೊಂಡು, ಒಟ್ಟಿನಲ್ಲಿ ಸ್ಟಾಟಿಸ್ಟಿಕಲ್ ವಿಧಾನಗಳನ್ನು ಬಳಸುವುದರ ಮೂಲಕ ಲಸಿಕೆ ಪರಿಣಾಮಕಾರಿತ್ವವನ್ನು ಅಂದಾಜಿಸಲಾಗಿದೆ‌ ಎಂದು ಸಿಡಿಸಿ ತಿಳಿಸಿದೆ.

ಒಮಿಕ್ರಾನ್-ಪ್ರಧಾನ ಅವಧಿಯಲ್ಲಿ, ಮೂರನೇ ಅಥವಾ ಬೂಸ್ಟರ್ ಡೋಸ್ ಪಡೆದ, ಕೋವಿಡ್-ಸಂಬಂಧಿತ ತುರ್ತು ವಿಭಾಗ ಅಥವಾ ತುರ್ತು ಆರೈಕೆ ಭೇಟಿಗಳ ಲಸಿಕೆ ಪರಿಣಾಮಕಾರಿತ್ವವು ಮೊದಲ ಎರಡು ತಿಂಗಳಲ್ಲಿ 87 ಪ್ರತಿಶತದಷ್ಟಿತ್ತು. ಆದರೆ ನಾಲ್ಕನೇ ತಿಂಗಳ ಹೊತ್ತಿಗೆ 66 ಪ್ರತಿಶತಕ್ಕೆ ಕುಸಿಯಿತು. ಮೂರನೇ ಡೋಸ್ ನಂತರ ಆಸ್ಪತ್ರೆಯ ದಾಖಲಾತಿ ವಿರುದ್ಧ ಲಸಿಕೆ ಪರಿಣಾಮಕಾರಿತ್ವವು ಮೊದಲ ಎರಡು ತಿಂಗಳಲ್ಲಿ 91 ಪ್ರತಿಶತದಷ್ಟಿತ್ತು, ಆದರೆ ನಾಲ್ಕನೇ ತಿಂಗಳಿಗೆ 78 ಪ್ರತಿಶತಕ್ಕೆ ಕುಸಿಯಿತು.

ಸಂಶೋಧನೆಯಲ್ಲಿ, mRNA ಲಸಿಕೆಗಳ ಮೂರನೇ ಡೋಸ್, ಮೂರನೇ ತಿಂಗಳಿನ ನಂತರ ಕ್ಷೀಣಿಸಿದೆ ಎಂದು ತಿಳಿದುಬಂದಿದೆ. ಲಸಿಕೆಯ ಪರಿಣಾಮಕಾರಿತ್ವವನ್ನು ಮತ್ತಷ್ಟು ಬಲಪಡಿಸಬೇಕೆಂದರೆ ಮತ್ತೊಂದು ಡೋಸ್ ನೀಡುವ ಅಗತ್ಯವಿದೆ ಎಂದು ಲೇಖಕರು ತಿಳಿಸಿದ್ದಾರೆ‌.

ಬುಧವಾರ ಶ್ವೇತಭವನದ ಕೋವಿಡ್ ಬ್ರೀಫಿಂಗ್‌ನಲ್ಲಿ ಮಾತನಾಡಿದ ಅಧ್ಯಕ್ಷ ಜೋ ಬಿಡೆನ್ ಅವರ ಉನ್ನತ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ, ವಯಸ್ಕರು, ಕಾಯಿಲೆ ಪೀಡಿತರು, ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರು ವೈರಸ್ ನಿಂದ ರಕ್ಷಣೆ ಪಡೆಯಬೇಕೆಂದರೆ ನಾಲ್ಕನೇ ಡೋಸ್ ಪಡೆಯಬೇಕಾದ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...