alex Certify ಅಚ್ಚರಿಗೊಳಿಸುತ್ತೆ ಈತ ಮಾಡಿರುವ ʼಗಿನ್ನಿಸ್ʼ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಈತ ಮಾಡಿರುವ ʼಗಿನ್ನಿಸ್ʼ ದಾಖಲೆ

ಮೆಲ್ಬೋರ್ನ್: ಪುಶ್-ಅಪ್ ವ್ಯಾಯಾಮ ಮಾಡುವುದು ಕೆಲವರಿಗೆ ಸರಳ ಎಂದೆನಿಸಿದರೂ 1 ನಿಮಿಷಗಳವರೆಗೆ ಪುಶ್ ಅಪ್ ರೀತಿಯಲ್ಲಿ ಹಲಗೆಯನ್ನು ಹಿಡಿದಿರುವುದು ಪ್ರಭಾವಶಾಲಿ ಸಾಧನೆ ಅಂತಾನೇ ಪರಿಗಣಿಸಲಾಗುತ್ತದೆ.

ಜಿಮ್ ಗೆ ಹೋಗುವವರು ಮತ್ತು ಕ್ರೀಡಾಪಟುಗಳು 1 ನಿಮಿಷಕ್ಕೂ ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಬಹುದು. ಕೆಲವರು ತಮ್ಮ ದೇಹ ಅಲುಗಾಡಿದರೂ 5 ನಿಮಿಷಗಳ ಕಾಲ ಹಿಡಿದಿಟ್ಟುಕೊಳ್ಳಬಹುದು.

ಆದರೆ, ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಮಾಡಿದ ಸಾಧನೆ ಕೇಳಿದ್ರೆ ಆಶ್ಚರ್ಯ ಪಡುತ್ತೀರಾ…!

ಕಲಬುರ್ಗಿ ಪಾಲಿಕೆ ಅತಂತ್ರ; ಜೆಡಿಎಸ್ ಜೊತೆ ಮೈತ್ರಿಗೆ ಮುಂದಾದ ಕಾಂಗ್ರೆಸ್…!

ಹೌದು, ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ ಎಂಬಾತ ಪುಶ್ ಅಪ್ ರೀತಿಯಲ್ಲಿ ಬಾಗಿ ಸ್ವಲ್ಪವೂ ಅಲುಗಾಡದೆ 9 ಗಂಟೆ 30 ನಿಮಿಷ ಹಾಗೂ 1 ಸೆಕೆಂಡ್ ಗಳ ಕಾಲ ಹಲಗೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಜಾರ್ಜ್ ಹುಡ್ ಎಂಬಾತ ಮಾಡಿದ್ದ ದಾಖಲೆಯನ್ನು ಸ್ಕಾಲಿ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಜಾರ್ಜ್ ಹುಡ್ 8 ಗಂಟೆ, 15 ನಿಮಿಷ ಹಾಗೂ 15 ಸೆಕೆಂಡ್ ಗಳ ಕಾಲ ಮಾಡಿದ್ದರು.

ಡೇನಿಯಲ್ ಸ್ಕಾಲಿ, ಸಿಆರ್ಪಿಎಸ್ ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಗಿನ್ನಿಸ್ ದಾಖಲೆ ನಿರ್ಮಿಸಿರುವುದು ಅಪಾರ ಪ್ರಶಂಸೆಗೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...