alex Certify ಮೋದಿ ಭೇಟಿ ವೇಳೆ ಹಾಸ್ಯ ಚಟಾಕಿ ಹಾರಿಸಿದ ಬಿಡೆನ್: ನಗೆಗಡಲಿಗೆ ಸಾಕ್ಷಿಯಾದ ಸನ್ನಿವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಭೇಟಿ ವೇಳೆ ಹಾಸ್ಯ ಚಟಾಕಿ ಹಾರಿಸಿದ ಬಿಡೆನ್: ನಗೆಗಡಲಿಗೆ ಸಾಕ್ಷಿಯಾದ ಸನ್ನಿವೇಶ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ನಡೆದ ಮೊಟ್ಟಮೊದಲ ದ್ವಿಪಕ್ಷೀಯ ಮಾತುಕತೆ ಫಲ ಕಂಡಿದೆ. ಭಾರತ ಮತ್ತು ಅಮೆರಿಕದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.

ಮೋದಿ ಭೇಟಿ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆಗೂ ಮೊದಲು ಬಿಡೆನ್ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

2013 ರಲ್ಲಿ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿದ್ದ ಬಿಡೆನ್ ಮುಂಬೈಗೆ ಭೇಟಿ ನೀಡಿದ್ದ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಮುಂಬೈ ಭೇಟಿಯ ಸಂದರ್ಭದಲ್ಲಿ ಭಾರತದ ಮಾಧ್ಯಮದವರು ನಿಮ್ಮ ಯಾವುದೇ ಸಂಬಂಧಿಕರು ಭಾರತದಲ್ಲಿ ನೆಲೆಸಿದ್ದಾರೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಇದರ ಬಗ್ಗೆ ನನಗೆ ಖಚಿತತೆಯಿಲ್ಲ. 1972 ರಲ್ಲಿ ನಾನು 29 ವರ್ಷದವನಾಗಿದ್ದಾಗ ಚುನಾಯಿತನಾಗಿದ್ದ ವೇಳೆ ಮುಂಬೈನಿಂದ ಬಿಡೆನ್ ಸರ್ ನೇಮ್ ಇರುವ ಪತ್ರವೊಂದು ಬಂದಿತ್ತು. ಆದರೆ, ಅದು ಯಾರು ಬರೆದ ಪತ್ರ ಎಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.

ಈ ಹಿಂದೆ ಈಸ್ಟ್ ಇಂಡಿಯಾ ಟೀ ಕಂಪನಿಯಲ್ಲಿ ಕ್ಯಾಪ್ಟನ್ ಜಾರ್ಜ್ ಬಿಡೆನ್ ಅವರು ಇದ್ದರು. ಬಿಡೆನ್ ಹೆಸರಿನ ಐವರು ಭಾರತದಲ್ಲಿದ್ದ ಬಗ್ಗೆ ಮಾಹಿತಿ ಗೊತ್ತಾಗಿತ್ತು. ಜಾರ್ಜ್ ಬಿಡೆನ್ ಭಾರತದ ಮಹಿಳೆಯನ್ನೇ ಮದುವೆಯಾಗಿ ಅಲ್ಲೇ ವಾಸವಾಗಿದ್ದರು. ನಾನು ಉಳಿದುಕೊಳ್ಳಲಿಲ್ಲ ಎಂದು ಹೇಳಿ ತಮಾಷೆ ಮಾಡಿದ್ದಾರೆ.

ಹೀಗೆ ಭಾರತದ ಸಂಬಂಧ, ಬಿಡೆನ್ ಹೆಸರಿನ ಬಗ್ಗೆ ಎದುರಾಗಿದ್ದ ಪ್ರಸಂಗವನ್ನು ಮೋದಿ ಭೇಟಿಯ ವೇಳೆ ಬಿಡೆನ್ ಪ್ರಸ್ತಾಪಿಸಿದಾಗ, ಮೋದಿ ಪ್ರತಿಕ್ರಿಯೆ ನೀಡಿ ಭಾರತದಲ್ಲಿ ಬಿಡೆನ್ ಸರ್ ನೇಮ್ ಹೊಂದಿದವರ ದಾಖಲೆ ತರಲಾಗಿದೆ. ಇದರಿಂದ ನಿಮಗೆ ಅನುಕೂಲವಾಗಬಹುದು. ಈ ಹಿಂದೆ ನಿಮ್ಮೊಂದಿಗೆ ಮಾತನಾಡಿದ್ದಾಗ ತಿಳಿಸಿದ್ದಂತೆ ಬಿಡೆನ್ ಸರ್ ನೇಮ್ ಹೊಂದಿರುವ ದಾಖಲೆ ನಿಮಗೆ ಸಹಾಯಕ್ಕೆ ಬರಬಹುದು ಎಂದಾಗ ಅಲ್ಲಿದ್ದವರೆಲ್ಲ ನಗಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...