ಸದಾ ಕೆಲಸದ ಒತ್ತಡದಲ್ಲಿರುವ ಜನರು ತಾಜಾ ಆಹಾರ ಸೇವನೆ ಮರೆಯುತ್ತಿದ್ದಾರೆ. ಸಮಯ ಉಳಿಸಲು ಒಂದೇ ಬಾರಿ ಆಹಾರ ತಯಾರಿಸಿ ಫ್ರಿಜ್ ನಲ್ಲಿಡುತ್ತಾರೆ. ನಂತ್ರ ಮೂರ್ನಾಲ್ಕು ದಿನಗಳ ಕಾಲ ಅದ್ರ ಸೇವನೆ ಮಾಡ್ತಾರೆ. ಆದ್ರೆ ಹೀಗೆ ಫ್ರಿಜ್ ನಲ್ಲಿ ಸಂಗ್ರಹಿಸಿಟ್ಟ ಆಹಾರ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಫ್ರಿಜ್ ನಲ್ಲಿ ಅನ್ನವನ್ನಿಟ್ಟಿದ್ದರೆ ಅದನ್ನು ಎರಡು ದಿನ ಮಾತ್ರ ಸೇವನೆ ಮಾಡಬಹುದು. ಅನ್ನವನ್ನು ಸ್ವಲ್ಪ ಸಮಯ ಹೊರಗಿಟ್ಟು ನಂತ್ರ ಸೇವನೆ ಮಾಡಬೇಕು.
ಮೂರ್ನಾಲ್ಕು ದಿನಕ್ಕೆ ಸಾಕಾಗುವಷ್ಟು ರೊಟ್ಟಿ ಹಿಟ್ಟನ್ನು ಒಂದೇ ಬಾರಿ ಕಲಸಿ ಅದನ್ನು ಅನೇಕರು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಇದು ತಪ್ಪು. ರೊಟ್ಟಿ ಹಿಟ್ಟು ತಯಾರಿಸಿ 12-14 ಗಂಟೆಯಲ್ಲಿ ಬಳಸಬೇಕು. ಇಲ್ಲವಾದ್ರೆ ಅದು ಪೌಷ್ಠಿಕಾಂಶವನ್ನು ಕಳೆದುಕೊಳ್ಳುತ್ತದೆ.
ಉಳಿದ ದಾಲನ್ನು ಎರಡು ದಿನದೊಳಗೆ ಸೇವನೆ ಮಾಡಬೇಕು. ಫ್ರಿಜ್ ನಲ್ಲಿಟ್ಟ ದಾಲ್, ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ.
ಕತ್ತರಿಸಿದ ಹಣ್ಣುಗಳನ್ನು ತುಂಬಾ ಸಮಯ ಫ್ರಿಜ್ ನಲ್ಲಿ ಇಡಬೇಡಿ. ಇಡಬೇಕಾದ ಅವಶ್ಯಕತೆ ಬಂದಲ್ಲಿ ಅದನ್ನು ಏರ್ ಟೈಟ್ ಬಾಕ್ಸ್ ನಲ್ಲಿ ಹಾಕಿಡಿ.
ಕತ್ತರಿಸಿದ ಪಪ್ಪಾಯಿಯನ್ನು ಫ್ರಿಜ್ ನ ಲ್ಲಿಟ್ಟಿದ್ದರೆ ಅದನ್ನು 6 ಗಂಟೆಯೊಳಗೆ ಬಳಸಬೇಕು.
ಕತ್ತರಿಸಿದ ಸೇಬು ಹಣ್ಣನ್ನು ನಾಲ್ಕು ಗಂಟೆಯೊಳಗೆ ಬಳಸಬೇಕು.
ಚೆರ್ರಿ ಹಣ್ಣನ್ನು 7 ದಿನಗಳವರೆಗೆ, ಸ್ಟ್ರಾಬೆರಿ ಮತ್ತು ಬ್ಲ್ಯಾಕ್ಬೆರಿಗಳನ್ನು 3 ರಿಂದ 6 ವಾರಗಳವರೆಗೆ, ಸಿಟ್ರಸ್ ಹಣ್ಣುಗಳನ್ನು 1 ರಿಂದ 3 ವಾರಗಳವರೆಗೆ, ದ್ರಾಕ್ಷಿಯನ್ನು 7 ದಿನಗಳವರೆಗೆ, ಕಲ್ಲಂಗಡಿಯನ್ನು ಎರಡು ವಾರ ಇಡಬಹುದು. ಅನಾನಸ್ 5 ರಿಂದ 7 ದಿನಗಳು, ಬೀನ್ಸ್ 3 ರಿಂದ 5 ದಿನಗಳು, ಕಾರ್ನ್ 1 ರಿಂದ 2 ದಿನಗಳು, ಸೌತೆಕಾಯಿಯನ್ನು 4 ರಿಂದ 6 ದಿನಗಳು ಮತ್ತು ಬದನೆಕಾಯಿಯನ್ನು 4 ರಿಂದ 7 ದಿನಗಳವರೆಗೆ ಇಡಬಹುದು.