ದೇಹದ ಆರೋಗ್ಯ ಕಾಪಾಡಲು, ದೇಹ ತೂಕವನ್ನು ನಿಯಂತ್ರಣದಲ್ಲಿಡಲು ಹಲವರು ರಾತ್ರಿ ವೇಳೆ ಊಟ ಮಾಡುವ ಬದಲು ಕೇವಲ ಹಣ್ಣುಗಳನ್ನು ಅಥವಾ ಬೇಯಿಸಿದ ತರಕಾರಿಗಳನ್ನು ತಿನ್ನುತ್ತಾರೆ. ಇದು ಎಷ್ಟು ಒಳ್ಳೆಯದು ನಿಮಗೆ ಗೊತ್ತೇ…?
ಮಧುಮೇಹಿಗಳು ಮತ್ತು ರಕ್ತದೊತ್ತಡ ಸಮಸ್ಯೆ ಇರುವವರು, ಹಣ್ಣುಗಳಿಗಿಂತ ಬೇಯಿಸಿದ ತರಕಾರಿ ತಿನ್ನುವುದು ಒಳ್ಳೆಯದು. ಇದರಿಂದ ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳೂ ದೊರೆಯುತ್ತವೆ. ಆದರೆ ತರಕಾರಿಗಳ ಪೈಕಿ ಗೆಡ್ಡೆ ಗೆಣಸುಗಳಿಂದ ದೂರವಿರುವುದೇ ಒಳ್ಳೆಯದು.
ಹಸಿರು ತರಕಾರಿ, ಸೊಪ್ಪುಗಳನ್ನು ಧಾರಾಳವಾಗಿ ತಿನ್ನಬಹುದು. ಇದರ ಹೊರತಾಗಿ ಯಾವುದೇ ಸಮಸ್ಯೆ ಇಲ್ಲದವರು ಇಷ್ಟ ಬಂದ ಹಣ್ಣನ್ನು ತಿನ್ನಬಹುದು. ದಿನಕ್ಕೊಂದು ರೀತಿಯ ಹಣ್ಣು ಸೇವಿಸುವುದು ಮತ್ತೂ ಒಳ್ಳೆಯದು.
ಥೈರಾಯ್ಡ್ ಸಮಸ್ಯೆ ಇರುವವರು ಮಾವಿನ ಹಣ್ಣನ್ನು ತಿನ್ನುವುದು ಬೇಡ. ಕಲ್ಲಂಗಡಿ ತಿಂದ ಬಳಿಕ ಹೆಚ್ಚು ನೀರು ಕುಡಿಯದಿರಿ. ರಾತ್ರಿಯ ಹಣ್ಣು ಸೇವನೆ 8 ಗಂಟೆಯೊಳಗೆ ಮುಗಿಯಲಿ.
ಮಾವು, ಬಾಳೆ ಮೊದಲಾದ ಹಣ್ಣುಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ಗಳಿದ್ದು ಇವು ದೇಹಕ್ಕೆ ಹೆಚ್ಚಿನ ಕ್ಯಾಲೊರಿ ಒದಗಿಸಬಹುದು. ತರಕಾರಿ ಸಲಾಡ್, ಮೊಳಕೆ ಕಾಳುಗಳನ್ನು ನಿಮ್ಮ ಊಟದಲ್ಲಿ ಸೇರಿಸಿದರೆ ದೇಹ ತೂಕವೂ ಕಡಿಮೆಯಾಗುತ್ತದೆ.