ಕೋವಿಡ್ನ ಹೊಸ ಅವತಾರಿ ಒಮಿಕ್ರಾನ್ ಬಗ್ಗೆ ಇಡೀ ಮನುಕುಲ ಬೆಚ್ಚಿಬಿದ್ದಿರುವ ಸಂದರ್ಭದಲ್ಲಿ, ಈ ವೈರಾಣು ವಿರುದ್ಧ ಕೋವಿಶೀಲ್ಡ್ ಲಸಿಕೆಯ ಪರಿಣಾಮವೇನು ಎಂಬುದು ಮುಂದಿನ 2-3 ವಾರಗಳಲ್ಲಿ ತಿಳಿದುಬರಲಿದೆ ಎಂದು ಸಿರಮ್ ಸಂಸ್ಥೆಯ ಸಿಇಓ ಅದರ್ ಪೂನಾವಾಲಾ ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಒಮಿಕ್ರಾನ್ ಎಷ್ಟು ಗಂಭೀರವಾದ ವೈರಸ್ ಎಂದು ಹೇಳಲಾಗದು ಎಂದಿರುವ ಪೂನಾವಾಲಾ, ಈ ವೈರಾಣುವನ್ನು ಗಮನದಲ್ಲಿಟ್ಟುಕೊಂಡು ಬೂಸ್ಟರ್ ಡೋಸ್ ಅನ್ನು ಸಿದ್ಧಪಡಿಸುವುದು ಸಾಧ್ಯವಿದೆ ಎಂದಿದ್ದಾರೆ. ಸದ್ಯದ ಮಟ್ಟಿಗೆ ಕೋವಿಡ್ ಲಸಿಕೆಯ ಎರಡೂ ಚುಚ್ಚಮದ್ದುಗಳನ್ನು ಪ್ರತಿಯೊಬ್ಬರಿಗೂ ನೀಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿರಬೇಕು ಎಂದು ಪೂನಾವಾಲಾ ತಿಳಿಸಿದ್ದಾರೆ.
ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ 10 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ವೈರಲ್..!
ಒಮಿಕ್ರಾನ್ಗೆ ಲಸಿಕೆ ಕಂಡುಹಿಡಿಯಲು ಆಕ್ಸ್ಫರ್ಡ್ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದು, ಈ ಹೊಸ ವೈರಾಣುವಿಗೆ ಮುಂದಿನ ಆರು ತಿಂಗಳಲ್ಲಿ ಬೂಸ್ಟರ್ ಡೋಸ್ ಅನ್ನು ಕಂಡು ಹಿಡಿಯಬಹುದಾಗಿದೆ ಎಂದು ಪೂನಾವಾಲಾ ಇದೇ ವೇಳೆ ತಿಳಿಸಿದ್ದಾರೆ.
“ಸದ್ಯದ ಮಟ್ಟಿಗೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡಬೇಕಿದೆ. ಇದಾದ ನಂತರವಷ್ಟೇ ರೋಗನಿರೋಧಕ ಶಕ್ತಿ ವರ್ಧಿಸಲು ನಾವು ಬೂಸ್ಟರ್ ಡೋಸ್ ನೀಡುವ ಕುರಿತಂತೆ ಚಿಂತಿಸಬಹುದಾಗಿದೆ,” ಎಂದು ಪೂನಾವಾಲಾ ತಿಳಿಸಿದ್ದಾರೆ.