alex Certify ನಾಯಿ ಕಚ್ಚಿದರೆ ಅಪಾಯಕಾರಿ ರೇಬೀಸ್ ಏಕೆ ಹರಡುತ್ತದೆ ? ಇಲ್ಲಿದೆ ಈ ಕುರಿತಾದ ಸಂಪೂರ್ಣ ವಿವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿ ಕಚ್ಚಿದರೆ ಅಪಾಯಕಾರಿ ರೇಬೀಸ್ ಏಕೆ ಹರಡುತ್ತದೆ ? ಇಲ್ಲಿದೆ ಈ ಕುರಿತಾದ ಸಂಪೂರ್ಣ ವಿವರ…!

ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಅಲ್ಲಲ್ಲಿ ನಾಯಿ ದಾಳಿ ಸುದ್ದಿ ಆಗಾಗ ಬರುತ್ತಲೇ ಇರುತ್ತದೆ. ಮಕ್ಕಳ ಮೇಲೆ ಶ್ವಾನಗಳು ದಾಳಿ ಮಾಡಿದ ಅನೇಕ ಪ್ರಕರಣಗಳಿವೆ. ಹಾಗಾಗಿ ಬೀದಿ ನಾಯಿಗಳು ಇರುವ ಕಡೆ ಮಕ್ಕಳನ್ನು ಒಂಟಿಯಾಗಿ ಬಿಡುವುದು ಅಪಾಯಕಾರಿ.

ಇತ್ತೀಚೆಗಷ್ಟೇ ಗಾಜಿಯಾಬಾದ್‌ನಲ್ಲಿ 14 ವರ್ಷದ ಬಾಲಕನಿಗೆ ನಾಯಿ ಕಚ್ಚಿತ್ತು. ಭಯದಿಂದ ಆತ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ. ಕೆಲ ದಿನಗಳ ನಂತರ ಆತನ ದೇಹದಲ್ಲಿ ಬದಲಾವಣೆಗಳು ಬರಲಾರಂಭಿಸಿದವು. ಬಾಲಕನ ಬಾಯಿಯಿಂದ ಜೊಲ್ಲು ಸೋರಲಾರಂಭಿಸಿತು, ನೀರು ಕುಡಿಯಲು ಕೂಡ ಆತ ಭಯಪಡುತ್ತಿದ್ದ. ತಂದೆ ಆತನನ್ನು ಹಲವು ಆಸ್ಪತ್ರೆಗಳಿಗೆ ಕರೆದೊಯ್ದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ರೇಬೀಸ್‌ ಕಾಯಿಲೆಗೆ ತುತ್ತಾದ ಬಾಲಕ ಮೃತಪಟ್ಟಿದ್ದಾನೆ.

ರೇಬೀಸ್ ಏಕೆ ಅಪಾಯಕಾರಿ ?

ರೇಬೀಸ್ ನಮ್ಮ ಕೇಂದ್ರ ನರವನ್ನು ಹಾನಿಗೊಳಿಸುವ ಒಂದು ಕಾಯಿಲೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಿರುತ್ತದೆ. ರೇಬೀಸ್ ಎಂದರೆ ಅಕ್ಷರಶಃ ‘ಹುಚ್ಚು’ ಎಂದರ್ಥ, ಇದು ನಾಯಿಗಳಿಂದ ಮಾತ್ರವಲ್ಲದೆ ಅನೇಕ ಕಾಡು ಮಾಂಸಾಹಾರಿ ಪ್ರಾಣಿಗಳ ಕಡಿತದಿಂದಲೂ ಹರಡುತ್ತದೆ.

ರೇಬೀಸ್ ವೈರಸ್ ಹೇಗೆ ಹರಡುತ್ತದೆ ?

ನಾಯಿಗಳು ಮತ್ತು ಅನೇಕ ಪ್ರಾಣಿಗಳ ಲಾಲಾರಸ ಗ್ರಂಥಿಗಳಲ್ಲಿ ರೇಬೀಸ್ ವೈರಸ್ ಇರುತ್ತದೆ. ನಾಯಿಗಳು ಮನುಷ್ಯನನ್ನು ಕಚ್ಚಿದಾಗ ಈ ವೈರಸ್ ರಕ್ತದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ನಂತರ ಮೆದುಳನ್ನು ತಲುಪುತ್ತದೆ ಮತ್ತು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ  ವ್ಯಕ್ತಿಯ ಲಾಲಾರಸ ಗ್ರಂಥಿಗಳಲ್ಲಿ ಹರಡುತ್ತದೆ ಮತ್ತು ಬಾಯಿಯಲ್ಲಿ ನೊರೆಯನ್ನು ಉತ್ಪಾದಿಸುತ್ತದೆ. ಈ ವೈರಸ್ 10 ದಿನಗಳಿಂದ 8 ತಿಂಗಳ ನಡುವೆ ಯಾವಾಗ ಬೇಕಾದರೂ ತನ್ನ ಪರಿಣಾಮವನ್ನು ತೋರಿಸಬಹುದು.

ಮಾನವರ ಮೇಲೆ ರೇಬೀಸ್ ವೈರಸ್‌ನ ಪರಿಣಾಮ

ರೇಬೀಸ್‌ಗೆ ತುತ್ತಾದ ವ್ಯಕ್ತಿಗೆ ತಲೆನೋವು, ವಾಕರಿಕೆ, ವಾಂತಿ, ಅನೋರೆಕ್ಸಿಯಾ ಮತ್ತು ಸ್ನಾಯುಗಳಲ್ಲಿ ಬಿಗಿತ ಉಂಟಾಗಬಹುದು. ಗಂಟಲಿನ ಸ್ನಾಯುಗಳು ಪಾರ್ಶ್ವವಾಯುವಿಗೆ ಒಳಗಾಗಬಹುದು. ಇದರಿಂದಾಗಿ ನೀರನ್ನು ನುಂಗಲು ಸಹ ಸಾಧ್ಯವಾಗುವುದಿಲ್ಲ. ವ್ಯಕ್ತಿ ಹೈಡ್ರೋಫೋಬಿಯಾಕ್ಕೆ ಬಲಿಯಾಗುತ್ತಾನೆ. ಎಂದರೆ ನೀರಿನ ಬಗ್ಗೆ ಭಯ ಬಂದುಬಿಡುತ್ತದೆ. ಅಷ್ಟೇ ಅಲ್ಲ, ಉಸಿರಾಟದ ವೈಫಲ್ಯ ಮತ್ತು ಹೃದಯ ವೈಫಲ್ಯದಿಂದ ವ್ಯಕ್ತಿಯು ಸಾಯುತ್ತಾನೆ.

ರೇಬೀಸ್‌ಗೆ ಚಿಕಿತ್ಸೆ ಏನು ?

ರೇಬೀಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ತಪ್ಪಿಸಬಹುದು. ನಾಯಿ ಕಚ್ಚಿದ ನಂತರ ತಕ್ಷಣ ಗಾಯವನ್ನು ಸ್ವಚ್ಛಗೊಳಿಸಬೇಕು. ಅದು ದೇಹದ ಉಳಿದ ಭಾಗಗಳಿಗೆ ಹರಡುವುದಿಲ್ಲ. ಇದಲ್ಲದೆ 24 ಗಂಟೆಗಳ ಒಳಗೆ ಎಂಟಿ-ರೇಬೀಸ್ ಸೀರಮ್ ಅನ್ನು ಪಡೆಯಬೇಕು. ಈ ಚುಚ್ಚುಮದ್ದು ಪ್ರತಿಜನಕದ ವಿರುದ್ಧ ಪೂರ್ವ ಸಿದ್ಧಪಡಿಸಿದ ಪ್ರತಿಕಾಯಗಳನ್ನು ನೀಡುತ್ತದೆ. ಸೀರಮ್ ನೀಡಲು ವಿಳಂಬವಾದರೆ ಜೀವ ಉಳಿಸುವುದು ಕಷ್ಟ. ಇದಲ್ಲದೇ ಸಾಕು ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು ನೀಡುವುದು ಸಹ ಅಗತ್ಯವಾಗಿದೆ.

ವಿಶ್ವ ರೇಬೀಸ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ಆಚರಿಸಲಾಗುತ್ತದೆ, ಇದು ಲೂಯಿಸ್ ಪಾಶ್ಚರ್ ಅವರ ಮರಣದ ವಾರ್ಷಿಕೋತ್ಸವವಾಗಿದೆ. ಅವರು ರೇಬೀಸ್ ಲಸಿಕೆಯನ್ನು ಸಿದ್ಧಪಡಿಸಿದ ವಿಜ್ಞಾನಿ. ಮಾನವರು ಮತ್ತು ಪ್ರಾಣಿಗಳ ಮೇಲೆ ರೇಬೀಸ್ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ರೇಬೀಸ್ ದಿನದ ಉದ್ದೇಶ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...