ಬೆಂಗಳೂರು : ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದು ಮಾಡೋಕೆ ಎಷ್ಟು ದಿನ ಬೇಕು ಎಂದು ಕುಮಾರಸ್ವಾಮಿ ಹೇಗೆ ನಿರ್ಧರಿಸುತ್ತಾರೆ? ಅವರು ವಿದೇಶಾಂಗ ವ್ಯವಹಾರದ ಸಚಿವರಾಗಿದ್ರಾ? ಅಥವಾ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ವೀಡಿಯೋ ಹಂಚಿಕೆ ಮಾಡುವುದು ತಪ್ಪೇ. ಆದರೆ ಅದು ಅತ್ಯಾಚಾರಕ್ಕಿಂತ ದೊಡ್ಡ ಅಪರಾಧ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇದು ಯಾವ ಐಪಿಸಿ ಸೆಕ್ಷನ್ ನಡಿ ಬರುತ್ತದೆ? ಅಥವಾ ಕುಮಾರಸ್ವಾಮಿ ಅವರದೇ ಹೊಸ ಐಪಿಸಿ ಸೆಕ್ಷನ್ ಯಾವುದಾದರೂ ಇದ್ದರೆ ಅದನ್ನಾದರೂ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಾಮೀನು ರಹಿತ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸದೆ ಬಿಡಲು ಸಾಧ್ಯವೇ? ಶಾಸಕರಾದ ಮಾತ್ರಕ್ಕೆ ಶಿಕ್ಷೆ ಕೊಡಬಾರದು ಎಂದು ಕಾನೂನು ಹೇಳುತ್ತದಾ? ಶಾಸಕರಿಗೆ ಒಂದು, ಜನಸಾಮಾನ್ಯರಿಗೆ ಒಂದು ರೀತಿ ಕಾನೂನು ಇದೆಯಾ? ಅಪರಾಧ ಯಾರು ಮಾಡಿದರೂ ಅಪರಾಧವೇ. ಇದರಲ್ಲಿ ಯಾವ ಒತ್ತಡವೂ ಇಲ್ಲ, ಇನ್ನೊಂದು ಇಲ್ಲ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಆ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.