alex Certify ಮಕ್ಕಳನ್ನೇ ಬಲಿ ಪಡೆಯುತ್ತಿರೋ ಮಾರಣಾಂತಿಕ ವೈರಸ್‌ಗೆ ‘ಚಂಡೀಪುರ’ ಎಂಬ ಹೆಸರು ಬಂದಿದ್ಹೇಗೆ….? ಇಲ್ಲಿದೆ ರೋಗದ ಕುರಿತ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನೇ ಬಲಿ ಪಡೆಯುತ್ತಿರೋ ಮಾರಣಾಂತಿಕ ವೈರಸ್‌ಗೆ ‘ಚಂಡೀಪುರ’ ಎಂಬ ಹೆಸರು ಬಂದಿದ್ಹೇಗೆ….? ಇಲ್ಲಿದೆ ರೋಗದ ಕುರಿತ ಸಂಪೂರ್ಣ ವಿವರ

ಗುಜರಾತ್ ಮತ್ತು ರಾಜಸ್ಥಾನದಲ್ಲಿ ನಿಗೂಢ ವೈರಸ್‌ ಆತಂಕ ಸೃಷ್ಟಿಸಿದೆ. ಈ ವೈರಸ್‌ನ ಹೆಸರು ‘ಚಂಡೀಪುರ’. ಮಕ್ಕಳ ಮೇಲೆ ಪರಿಣಾಮ ಬೀರಬಲ್ಲ ಮಾರಕ ವೈರಸ್‌ ಇದು. ಅದರ ರೋಗಲಕ್ಷಣಗಳು ತೀವ್ರವಾಗಿರುತ್ತವೆ. ಗುಜರಾತ್‌ನ ಅರಾವಳಿ ಮತ್ತು ಸಬರ್ಕಾಂತ ಜಿಲ್ಲೆಗಳಲ್ಲಿ ಚಂಡೀಪುರ ವೈರಸ್‌ ಪತ್ತೆಯಾಗಿದೆ. ಈ ಜಿಲ್ಲೆಗಳಲ್ಲಿ ಶಂಕಿತ ಸೋಂಕಿನಿಂದ ಆರು ಮಕ್ಕಳು ಸಾವನ್ನಪ್ಪಿದ್ದಾರೆ.

ತಜ್ಞರ ಪ್ರಕಾರ ಚಂಡೀಪುರ ವೈರಲ್ ಎನ್ಸೆಫಾಲಿಟಿಸ್ ಎಂಬ ಈ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆದರೆ ಜಾಗರೂಕರಾಗಿರಬೇಕು. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹರಡಿರುವ ಈ ನಿಗೂಢ ವೈರಸ್ ದೇಶಾದ್ಯಂತ ಆತಂಕಕ್ಕೂ ಕಾರಣವಾಗಿದೆ.

ಮಾರಣಾಂತಿಕ ವೈರಸ್‌ಗೆ ಚಂಡೀಪುರಎಂಬ ಹೆಸರು ಬಂದಿದ್ಹೇಗೆ?

ಈ ವೈರಸ್ ಮೊದಲ ಬಾರಿಗೆ 1966 ರಲ್ಲಿ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಚಂಡಿಪುರ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ 15 ವರ್ಷದೊಳಗಿನ ಮಕ್ಕಳ ನಿಗೂಢ ಸಾವು ಸಂಭವಿಸುತ್ತಿತ್ತು. ಸಾವುಗಳಿಗೆ ಕಾರಣ ವೈರಸ್ ಎಂಬುದು ದೃಢಪಟ್ಟ ಬಳಿಕ ಅದಕ್ಕೆ ‘ಚಂಡೀಪುರ’ ಎಂದು ಹೆಸರಿಡಲಾಗಿದೆ.

ಚಂಡಿಪುರ ವೈರಸ್‌ನ ಲಕ್ಷಣಗಳೇನು?

* ವಿಪರೀತ ಜ್ವರ

* ವಾಂತಿ

* ಅತಿಸಾರ

* ತಲೆನೋವು

* ಮೆದುಳಿನ ಉರಿಯೂತ (ಎನ್ಸೆಫಾಲಿಟಿಸ್)

ವೈರಸ್ ಹೇಗೆ ಹರಡುತ್ತದೆ?

ಈ ವೈರಸ್ ವೆಸಿಕ್ಯುಲೋವೈರಸ್ ಕುಟುಂಬದ ಸದಸ್ಯ ಮತ್ತು ಸೋಂಕಿತ ಸೊಳ್ಳೆ, ಟಿಕ್ ಅಥವಾ ಸ್ಯಾಂಡ್‌ಫ್ಲೈ ಕಚ್ಚುವಿಕೆಯಿಂದ ಹರಡುತ್ತದೆ. ಸ್ಯಾಂಡ್‌ಫ್ಲೈ ಒಂದು ಸಣ್ಣ ನೊಣ, ಇದು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ವೈರಸ್ ಮುಖ್ಯವಾಗಿ 9 ತಿಂಗಳಿಂದ 14 ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ವೈರಸ್‌ನಿಂದ ಪಾರಾಗುವುದು ಹೇಗೆ?

* ಸೊಳ್ಳೆಗಳು ಮತ್ತು ನೊಣಗಳಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಪರದೆಗಳನ್ನು ಬಳಸಿ.

* ಚರ್ಮವನ್ನು ಆವರಿಸುವ ಬಟ್ಟೆಗಳನ್ನು ಧರಿಸಿ.

* ನೊಣಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸಿ.

* ಮಕ್ಕಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಿ.

ಗುಜರಾತ್‌ನಲ್ಲಿ ಈ ವೈರಸ್‌ನ 9 ಪ್ರಕರಣಗಳು ವರದಿಯಾಗಿದೆ. ಗುಜರಾತ್‌ನಲ್ಲಿ 6 ಸಾವುಗಳು ಸಂಭವಿಸಿವೆ, ಆದರೆ ಈ ಸಾವುಗಳಿಗೆ ಚಂಡಿಪುರ ವೈರಸ್ ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ. ರಾಜಸ್ಥಾನದಲ್ಲೂ ಈ ವೈರಸ್ ಪತ್ತೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...