ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಪ್ರಾಣಿಗಳು ಇಳಿಯುವುದನ್ನು ನಾವು ಎಷ್ಟೋ ಬಾರಿ ನೋಡಿರುತ್ತೇವೆ. ಮರದ ಮೇಲೆ ಎತ್ತರಕ್ಕೆ ಏರುವ ಬೆಕ್ಕು ಅಥವಾ ನಾಯಿಯು ಹೇಗಾದರೂ ಕಮರಿಯ ಆಳಕ್ಕೆ ಇಳಿಯುತ್ತದೆ, ನೆಲದ ಮೇಲೆ ಇಳಿಯಲು ಇವುಗಳು ಹೆಣಗಾಡಿದರೂ ಹೇಗೋ ಸುರಕ್ಷಿತವಾಗಿ ಇಳಿಯಲು ಅವುಗಳಿಗೆ ಸಾಧ್ಯವಿದೆ. ಹಾರಿ ಇಳಿಯುವ ಸಾಮರ್ಥ್ಯ ಅವುಗಳಿಗೆ ಇದೆ.
ಹಾಗೆಂದು ದನವೂ ಹಾಗೆಯೇ ಮಾಡಿದರೆ ? ಇಂಥದ್ದೊಂದು ಭಯಾನಕ ದೃಶ್ಯದ ವಿಡಿಯೋ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ಕೊಟ್ಟಿಗೆಯ ಛಾವಣಿಯ ಮೇಲೆ ಹಸು ಹತ್ತಿದೆ. ಅದು ಅಲ್ಲಿಗೆ ಹೇಗೆ ಹತ್ತಿದೆಯೋ ಆ ದೇವರೇ ಬಲ್ಲ. ಆದರೆ ಕೆಳಕ್ಕೆ ಇಳಿಯಲು ಸಾಧ್ಯವಾಗದೇ ಪೇಚಿಗೆ ಸಿಲುಕಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮೊದಲಿಗೆ ಮೇಲೆ ಹೋದ ಖುಷಿಯಲ್ಲಿ ಹಸು ಅತ್ತಿತ್ತ ಓಡಾಟ ಮಾಡಿದೆ. ಆದರೆ ನಂತರ ಕೆಳಕ್ಕೆ ಇಳಿಯಲು ಅದಕ್ಕೆ ದಾರಿ ತಿಳಿಯದೇ ಒದ್ದಾಡುವುದನ್ನು ಗಮನಿಸಬಹುದಾಗಿದೆ. ಇದರ ವಿಡಿಯೋವನ್ನು ಅಲ್ಲಿಯೇ ಇದ್ದವರು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಹಸು ಇನ್ನೊಂದು ಕಡೆಯಿಂದ ಇಳಿಯಲು ಪ್ರಯತ್ನ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಅದು ಯಶಸ್ವಿಯಾಯಿತೆ ಇಲ್ಲವೇ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಟ್ವಿಟರ್ ಬಳಕೆದಾರರು ಪ್ರಾಣಿಗಳ ಮೇಲೆ ಸದಾ ಕಣ್ಣು ಇಡಿ ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
https://twitter.com/buitengebieden/status/1624707006916329478?ref_src=twsrc%5Etfw%7Ctwcamp%5Etweetembed%7Ctwterm%5E1624707006916329478%7Ctwgr%5E195518d0382dd8af0b9f4b54c48be2f3b1b2ab2e%7Ctwcon%5Es1_&ref_url=https%3A%2F%2Fwww.india.com%2Fviral%2Fhow-did-the-cow-reach-up-there-watch-viral-video-5895126%2F