ಫೆಬ್ರವರಿಯನ್ನು ಪ್ರೀತಿಯ ತಿಂಗಳು ಎಂದೇ ಕರೆಯಲಾಗುತ್ತದೆ. ಎಲ್ಲೆಡೆ ವ್ಯಾಲಂಟೈನ್ ದಿನದ ಸಂಭ್ರಮ ಮನೆಮಾಡಿದೆ. ಈ ದಿನಕ್ಕಾಗಿ ಪ್ರೇಮಿಗಳು, ದಂಪತಿಗಳು ಕಾಯುತ್ತಾರೆ. ಪರಸ್ಪರ ಪ್ರೀತಿ ವ್ಯಕ್ತಪಡಿಸಲು ಇದು ಸೂಕ್ತ ಸಮಯ. ಪ್ರತಿ ವರ್ಷ ಫೆಬ್ರವರಿ 14 ರಂದು ವ್ಯಾಲಂಟೈನ್ ಡೇ ಆಚರಿಸಲಾಗುತ್ತದೆ. ಫೆಬ್ರವರಿ 14ರಂದೇ ಪ್ರೇಮಿಗಳ ದಿನ ಆಚರಿಸುವುದ್ಯಾಕೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಪ್ರೇಮಿಗಳ ದಿನದ ಇತಿಹಾಸ ತಿಳಿಯೋಣ.
ಪ್ರೇಮಿಗಳ ದಿನದ ಆಚರಣೆ ರೋಮ್ ದೇಶದ ಸಂತ ವ್ಯಾಲೆಂಟೈನ್ಗೆ ಸಂಬಂಧಿಸಿದೆ. ರೋಮನ್ ರಾಜ ಕ್ಲಾಡಿಯಸ್, ಪ್ರೀತಿಯ ವಿರುದ್ಧ ಧ್ವನಿ ಎತ್ತಿದ್ದನಂತೆ. ಪ್ರೀತಿ ಮತ್ತು ಮದುವೆ ಪುರುಷರ ಬುದ್ಧಿವಂತಿಕೆ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಆತನ ನಂಬಿಕೆಯಾಗಿತ್ತು. ಸೈನಿಕರು ಕೂಡ ಮದುವೆಯಾಗಬಾರದು ಅನ್ನೋದು ರಾಜನ ಅಭಿಪ್ರಾಯ. ಆದರೆ ಸೇಂಟ್ ವ್ಯಾಲೆಂಟೈನ್, ಪ್ರೀತಿಯನ್ನು ಪ್ರೋತ್ಸಾಹಿಸಿದ. ಪ್ರೀತಿಯೇ ಜೀವನವೆಂದು ಘೋಷಿಸಿ ರಾಜನ ವಿರುದ್ಧ ಹೋಗಿ ಅನೇಕರನ್ನು ಮದುವೆಯಾದನು.
ಸೇಂಟ್ ವ್ಯಾಲೆಂಟೈನ್, ರಾಜನ ವಿರುದ್ಧ ಧ್ವನಿಯೆತ್ತಿ ಅನೇಕರನ್ನು ವಿವಾಹವಾಗಿದ್ದಕ್ಕೆ ಆತನಿಗೆ ಮರಣದಂಡನೆ ವಿಧಿಸಲಾಯ್ತು. ಫೆಬ್ರವರಿ 14 ರಂದು ಸೇಂಟ್ ವ್ಯಾಲೆಂಟೈನ್ನನ್ನು ಗಲ್ಲಿಗೇರಿಸಲಾಯಿತು. ಬಳಿಕ ಈ ದಿನವನ್ನು ವ್ಯಾಲಂಟೈನ್ಸ್ ಡೇ ಆಗಿ ಆಚರಿಸಲಾಗುತ್ತಿದೆ.
496 ರಲ್ಲಿ ಪ್ರಪಂಚದಾದ್ಯಂತ ಮೊದಲ ಬಾರಿಗೆ ಪ್ರೇಮಿಗಳ ದಿನವನ್ನು ಆಚರಿಸಲಾಯಿತು. ನಂತರ ಐದನೇ ಶತಮಾನದಲ್ಲಿ ರೋಮ್ನ ಪೋಪ್ ಗೆಲಾಸಿಯಸ್ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿದರು. ಈ ಘೋಷಣೆಯ ನಂತರ ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.