ಸದ್ಯ ಈವಿಲ್ ಐ ಆಭರಣಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ. ಈವಿಲ್ ಐ ಇರುವ ಚೈನ್, ಬಳೆಗಳು, ಕಾಲುಂಗುರ, ಕಾಲಿನ ಚೈನ್ ಅಥವಾ ಆಂಕ್ಲೆಟ್ ಸಿಕ್ಕಾಪಟ್ಟೆ ಫ್ಯಾಷನೇಬಲ್ ಆಗಿಯೂ ಕಾಣುತ್ತವೆ. ಜ್ಯೋತಿಷ್ಯದ ಪ್ರಕಾರ ಈವಿಲ್ ಐ, ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಸಹಾಯ ಮಾಡುತ್ತದೆ. ದುಷ್ಟ ಕಣ್ಣುಗಳಿಂದ ನಮ್ಮನ್ನು ರಕ್ಷಿಸುತ್ತದೆ
ಆರಂಭದಲ್ಲಿ ಈವಿಲ್ ಐ ಆಭರಣಗಳನ್ನು ಕುತ್ತಿಗೆ ಮತ್ತು ಕೈಗೆ ಬಳೆ ರೂಪದಲ್ಲಿ ಮಾತ್ರ ಧರಿಸಲಾಗುತ್ತಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಹಲವು ರೀತಿಯ ಆಯ್ಕೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಇತ್ತೀಚಿನ ದಿನಗಳಲ್ಲಿ ಈವಿಲ್ ಐ ಆಂಕ್ಲೆಟ್ಸ್ ಬಹಳ ಜನಪ್ರಿಯವಾಗಿದೆ.
ಆದರೆ ಇವುಗಳನ್ನು ಕಾಲಿಗೆ ಧರಿಸುವುದು ಸರಿಯೇ? ಅದನ್ನು ಪಾದಗಳ ಮೇಲೆ ಧರಿಸುವುದರಿಂದ ಕೆಟ್ಟ ಪರಿಣಾಮವೇನಾದರೂ ಉಂಟಾಗಬಹುದಾ ಅನ್ನೋ ಗೊಂದಲವೂ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈವಿಲ್ ಐ ಆಂಕ್ಲೆಟ್‌ಗಳನ್ನು ಧರಿಸುವುದು ತಪ್ಪಲ್ಲ. ವಿಶೇಷವಾಗಿ ಮಹಿಳೆಯರು ಇದನ್ನು ಎಡ ಪಾದದ ಮೇಲೆ ಧರಿಸಬೇಕು. ಇದನ್ನು ಧರಿಸುವುದರಿಂದ ದುಷ್ಟಶಕ್ತಿಯೊಂದಿಗೆ ನಕಾರಾತ್ಮಕ ಶಕ್ತಿ ಸಹ ನಮ್ಮ ಬಳಿ ಸುಳಿಯುವುದಿಲ್ಲ. ಶಕ್ತಿಯು ಪಾದಗಳ ಮೂಲಕ ಹರಡುತ್ತದೆ, ಆದ್ದರಿಂದ ಪಾದಗಳಲ್ಲಿ ಈವಿಲ್ ಐ ಧರಿಸಿದಾಗ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಯಾವುದೇ ರೀತಿಯ ಶಕ್ತಿಯಾದರೂ ಮೊದಲು ಈವಿಲ್ ಐ ಜೊತೆ ಘರ್ಷಣೆ ನಡೆಸುತ್ತದೆ. ಧನಾತ್ಮಕ ಶಕ್ತಿಯಾಗಿದ್ದರೆ ಮಾತ್ರ ಅದು ದೇಹವನ್ನು ಪ್ರವೇಶಿಸುತ್ತದೆ, ಇಲ್ಲದಿದ್ದರೆ ನಮ್ಮಿಂದ ಅದು ದೂರವಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ನೀಲಿ ಬಣ್ಣವು ನೆಪ್ಚೂನ್ ಗ್ರಹಕ್ಕೆ ಸಂಬಂಧಿಸಿದೆ. ಕಣ್ಣುಗಳ ರೂಪದಲ್ಲಿ ಧರಿಸಿರುವ ಈವಿಲ್ ಐ ಪಾದಗಳ ಮೇಲೆ ಇರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾವುದೇ ಸಂದೇಹವಿಲ್ಲದೆ ಈವಿಲ್ ಐ ಆಂಕ್ಲೆಟ್‌ಗಳನ್ನು ಧರಿಸಬಹುದು.