alex Certify ಇರುವುದರಲ್ಲೇ ಸಂಭ್ರಮ ಪಡೋದು ಹೇಗೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರುವುದರಲ್ಲೇ ಸಂಭ್ರಮ ಪಡೋದು ಹೇಗೆ…..?

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎನ್ನುವಂತೆ, ತಮಗಿರುವುದಕ್ಕಿಂತ ಇನ್ನೂ ಏನೋ ಬೇಕೆನಿಸುತ್ತದೆ.

ಮನುಷ್ಯನಿಗೆ ಆಸೆ ಸಹಜ. ಆದರೆ, ಅತಿ ಆಸೆ ಸರಿಯಲ್ಲ. ಇರುವುದರಲ್ಲೇ ತೃಪ್ತಿ ಪಡಬೇಕು. ಅದರಲ್ಲೇ ಆನಂದ ಕಾಣಬೇಕು.

ಕೆಲಸವಿಲ್ಲದವರಿಗೆ ಕೆಲಸ ಸಿಗಲೆಂಬ ಚಿಂತೆ. ಕೆಲಸ ಸಿಕ್ಕಾದ ಮೇಲೆ ವೇತನದ ಚಿಂತೆ. ಬೈಕಿದ್ದರೆ, ಕಾರು ಕೊಳ್ಳುವ ಆಸೆ, ಸೈಟಿದ್ದರೆ ಮನೆ ಕಟ್ಟುವ ಬಯಕೆ. ಬೇರೆಯವರನ್ನು ನೋಡಿದಾಗ ಅವರಂತೆ ಆಗಬೇಕಿನಿಸುತ್ತದೆ. ಹೀಗೆ ಮನುಷ್ಯ ಸಹಜ ಆಸೆ ಇದ್ದೇ ಇರುತ್ತದೆ.

ಇಲ್ಲದಿರುವ ಬಗ್ಗೆ ಕೊರಗುವ ಬದಲು ಇರುವುದರಲ್ಲೇ ತೃಪ್ತಿ ಪಡುವುದು ಕೂಡ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ನಮಗಿಂತ ಶ್ರೀಮಂತರನ್ನು ನೋಡಿ ಅವರಂತೆ ಆಗಬೇಕು ಎನ್ನುವುದಕ್ಕಿಂತ ನಮಗಿಂತ ಕೆಳಗಿನವರನ್ನು ನೋಡಿ ಅವರಿಗಿಂತ ನಾನು ಉತ್ತಮವಾಗಿದ್ದೇನೆ ಎಂದುಕೊಳ್ಳುವುದು ತೃಪ್ತಿ ನೀಡುತ್ತದೆ.

ಇರುವುದರಲ್ಲೆ ಸಿಗುವ ತೃಪ್ತಿ ಪಡುವುದು ನಿಮಗೆ ಹೆಚ್ಚು ಖುಷಿ ಕೊಡುತ್ತದೆ. ಹಾಗೆಂದು ಆಸೆಗಳನ್ನೆಲ್ಲಾ ಅದುಮಿಟ್ಟುಕೊಳ್ಳಬೇಡಿ. ನೀವು ಕಾಣುವ ಕನಸು ಕೈಗೆಟುಕುವಂತಿರಲಿ. ಆಸೆಗಳು ಕೈಗೂಡಲು ಪ್ರಯತ್ನ ಕೂಡ ಮುಖ್ಯ ಎಂಬುದು ನೆನಪಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...