alex Certify ಜಗತ್ತಿನಲ್ಲಿ ಕೆಲವರು ಮಾತ್ರ 100 ವರ್ಷಕ್ಕೂ ಅಧಿಕ ಕಾಲ ಬದುಕುವುದ್ಹೇಗೆ ? ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನಲ್ಲಿ ಕೆಲವರು ಮಾತ್ರ 100 ವರ್ಷಕ್ಕೂ ಅಧಿಕ ಕಾಲ ಬದುಕುವುದ್ಹೇಗೆ ? ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ….!

ನೂರು ವರ್ಷ ಬದುಕಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಆದರೆ ಎಲ್ಲರೂ ಶತಾಯುಷಿಗಳಾಗುವುದು ಅಸಾಧ್ಯ. ಜಗತ್ತಿನಲ್ಲಿ ಕೆಲವೇ ಕೆಲವರು 100 ವರ್ಷಕ್ಕೂ ಅಧಿಕ ಸಮಯ ಬದುಕುತ್ತಾರೆ. ಇದಕ್ಕೆ ಕಾರಣ ಏನಿರಬಹುದು ಅನ್ನೋ ಕುತೂಹಲ ನಮ್ಮಲ್ಲಿದೆ. ಇದಕ್ಕೆ ಕಾರಣವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ವಿಜ್ಞಾನಿಗಳ ಪ್ರಕಾರ 100 ವರ್ಷ ಬದುಕುವ ಮನುಷ್ಯರ ರಕ್ತ ವಿಭಿನ್ನ ಮತ್ತು ವಿಶೇಷವಾಗಿರುತ್ತದೆ.

ವಯಸ್ಸಾದಂತೆ ಬಗೆಬಗೆಯ ಕಾಯಿಲೆಗಳು, ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಶತಾಯುಷಿಗಳ ಆಯಸ್ಸಿನ ರಹಸ್ಯ ಕಂಡುಹಿಡಿಯಲು ವಿಜ್ಞಾನಿಗಳು 60 ವರ್ಷ ದಾಟಿದವರು, 100 ವರ್ಷ ಮತ್ತು ಅದಕ್ಕೂ ಹೆಚ್ಚು ವರ್ಷ ದಾಟಿದ ವ್ಯಕ್ತಿಗಳ ರಕ್ತ ಪರೀಕ್ಷೆ ನಡೆಸಿದ್ದಾರೆ. 100 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿರುವವರ ರಕ್ತದಲ್ಲಿ ಗ್ಲುಕೋಸ್‌ ಮಟ್ಟ, ಕ್ರೆಟಿನಿನ್‌ ಮತ್ತು ಯೂರಿಕ್‌ ಆಸಿಡ್‌ ಕಡಿಮೆಯಿತ್ತು. ಇದೇ ಕಾರಣಕ್ಕೆ ಅವರಲ್ಲಿ ಚಯಾಪಚಯ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ. ಆದರೆ ಲಿವರ್‌ನ ಕಾರ್ಯಕ್ಷಮತೆ ಶತಾಯುಷಿಗಳಲ್ಲಿ ಮತ್ತು ಇತರರಲ್ಲಿ ಒಂದೇ ತೆರನಾಗಿ ಕಂಡುಬಂದಿದೆ.

ಮೆಟಬಾಲಿಸಂ ಅಧಿಕವಾಗಿರುವುದರಿಂದ ಶತಾಯುಷಿಗಳ ದೇಹದ ಅಂಗಾಂಗಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ. ಆಯಸ್ಸಿನ ರಹಸ್ಯ ಇದೊಂದೇ ಅಲ್ಲ, ಜೀವನ ಶೈಲಿ ಮತ್ತು ಜೆನೆಟಿಕ್ಸ್‌ಗೂ ಸಂಬಂಧಿಸಿರುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಹಾಗಾಗಿ ದೀರ್ಘಾಯಸ್ಸಿನ ರಹಸ್ಯವನ್ನು ಬೇಧಿಸಲು ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...