
ಕೆಲಸದ ಒತ್ತಡ ಹಾಗೂ ಸಮಯದ ಜೊತೆ ಓಡಾಟದಿಂದ ಜನರು ಒತ್ತಡಕ್ಕೊಳಗಾಗುತ್ತಿದ್ದಾರೆ. ಇದು ದಂಪತಿ ನಡುವಿನ ಬೆಡ್ ರೂಂ ಸಂಬಂಧದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನಗರ ಜೀವನದಲ್ಲಿ ಲೈಂಗಿಕ ಜೀವನ ಹದಗೆಡುತ್ತಿದೆ. ಹಾಳಾಗುತ್ತಿರುವ ಸೆಕ್ಸ್ ಜೀವನವನ್ನು ಸುಖಮಯವಾಗಿಸುವ ಟಿಪ್ಸ್ ಕೂಡ ನಿಮ್ಮ ಕೈನಲ್ಲಿಯೇ ಇದೆ.
ಏಕಾಏಕಿ ಸಂಭೋಗ ದಂಪತಿ ಮಧ್ಯೆ ಬಲು ಕಷ್ಟ. ಇದು ಸಂಗಾತಿ ದಿಗ್ಭ್ರಮೆಗೆ ಕಾರಣವಾಗಬಹುದು. ಮೊದಲು ದೇಹವನ್ನು ಮಸಾಜ್ ಮಾಡಿ. ಶಾಂತವಾಗಿರುವ ಸೆಕ್ಸ್ ಹಾರ್ಮೋನ್ ಗಳನ್ನು ಜಾಗೃತಗೊಳಿಸಬೇಕಾಗುತ್ತದೆ.
ಸಂಬಂಧದಲ್ಲಿ ಅಹಂ ಬೇಡ. ಇಬ್ಬರೂ ಸ್ನೇಹಿತರಾಗಿರಿ. ಭಾಷೆ ಜೊತೆ ಬಾಡಿ ಲಾಂಗ್ವೇಜ್ ತಿಳಿದುಕೊಳ್ಳಲು ಪ್ರಯತ್ನಿಸಿ. ಸಂಗಾತಿ ಮಧ್ಯೆ ಅನ್ಯೋನ್ಯತೆ ಇದ್ದಲ್ಲಿ ಸಂಭೋಗಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ.
ಸಂಗಾತಿ ಕಂಫರ್ಟ್ ಆಗಿಲ್ಲವೆಂದಾದ್ರೆ ಅವರ ಮೂಡ್ ಸರಿ ಮಾಡಿ ಒತ್ತಡ ಕಡಿಮೆ ಮಾಡಲು ಯತ್ನಿಸಿ. ಒಳ್ಳೆಯ ಸಿನಿಮಾ ನೋಡಿ. ಇಲ್ಲ ಲಾಂಗ್ ಡ್ರೈವ್ ಗೆ ಹೋಗಿ ಬನ್ನಿ. ಸುಂದರ ಹಾಡನ್ನು ಕೇಳಿ. ಪರಸ್ಪರ ಸಮಯ ಕಳೆಯಿರಿ.