ರಾಜ್ಯಸಭೆ ಅಂದರೆ ‘ರಾಜ್ಯಗಳ ಕೌನ್ಸಿಲ್’ ಶಾಶ್ವತ ಸದನವಾಗಿದೆ. ಇದು ವಿಸರ್ಜನೆಗೆ ಒಳಪಡುವುದಿಲ್ಲ. ಪೂರ್ಣಾವಧಿಗೆ ಚುನಾಯಿತರಾದ ಸದಸ್ಯರು ಆರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ. ಪ್ರತಿ ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ(UT) ಪ್ರತಿನಿಧಿಗಳನ್ನು ವಿಧಾನಸಭೆಯ ಚುನಾಯಿತ ಸದಸ್ಯರು ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಏಕ ವರ್ಗಾವಣೆ ಮತದ ಮೂಲಕ ಆಯ್ಕೆ ಮಾಡುತ್ತಾರೆ.
ಕೇಂದ್ರಾಡಳಿತ ಪ್ರದೇಶದ ಸಂದರ್ಭದಲ್ಲಿ, ಚುನಾವಣಾ ಕಾಲೇಜು(Electoral College) ರಾಜ್ಯಸಭಾ ಸದಸ್ಯರಿಗೆ ಮತ ಹಾಕುತ್ತದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕಾಗಿ ಚುನಾವಣಾ ಕಾಲೇಜು ದೆಹಲಿಯ ವಿಧಾನಸಭೆಯ ಚುನಾಯಿತ ಸದಸ್ಯರನ್ನು ಒಳಗೊಂಡಿರುತ್ತದೆ. ಪುದುಚೇರಿಗೆ ಪುದುಚೇರಿ ವಿಧಾನಸಭೆಯ ಚುನಾಯಿತ ಸದಸ್ಯರನ್ನು ಒಳಗೊಂಡಿರುತ್ತದೆ.