ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಬ್ರಾ ಧರಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬ್ರಾ ಧರಿಸುವುದರಿಂದ ದೇಹದ ಆಕಾರ ಸರಿಯಾಗಿರುತ್ತದೆ. ಸ್ತನಗಳನ್ನು ಸರಿಯಾದ ಶೇಪ್‌ನಲ್ಲಿಟ್ಟುಕೊಳ್ಳುವುದರ ಜೊತೆಗೆ ನಮ್ಮ ಒಟ್ಟಾರೆ ಲುಕ್ ಕೂಡ ಸುಧಾರಿಸುತ್ತದೆ. ಅನೇಕ ಮಹಿಳೆಯರು ರಾತ್ರಿ ಕೂಡ ಬ್ರಾ ಧರಿಸಿ ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಬ್ರಾ ತೆಗೆದಿಟ್ಟು ನಿದ್ರಿಸಬಹುದು. ಹಾಗಿದ್ದಲ್ಲಿ ಮಹಿಳೆಯರು ರಾತ್ರಿ ಬ್ರಾ ಧರಿಸಿ ಮಲಗಬೇಕೇ ಅಥವಾ ಬೇಡವೇ ಎಂಬುದಕ್ಕೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ತಿಳಿಯೋಣ.
ಬ್ರಾ ಧರಿಸಿ ಮಲಗುವುದು ಅನೇಕರಿಗೆ ಅಹಿತಕರವಾಗಿರುತ್ತದೆ. ಆದ್ದರಿಂದ ರಾತ್ರಿಯಲ್ಲಿ ಬ್ರಾ ತೆಗೆದು ಮಲಗುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಮಲಗುವಾಗ ಸಡಿಲವಾದ ಮತ್ತು ಆರಾಮದಾಯಕವಾದ ಬ್ರಾ ಧರಿಸಿದರೆ ಅದು ಹಾನಿ ಮಾಡುವುದಿಲ್ಲ. ಆದರೆ ರಾತ್ರಿ ಮಲಗುವಾಗಲೂ ಬಿಗಿಯಾದ ಬ್ರಾ ಧರಿಸಿದರೆ ಅದರಿಂದ ಸಮಸ್ಯೆಗಳಾಗುತ್ತವೆ. ಇದರಿಂದ ನಿದ್ರೆಗೆ ತೊಂದರೆ ಆಗಬಹುದು. ಚರ್ಮದಲ್ಲಿ ತುರಿಕೆ ಮತ್ತು ದದ್ದುಗಳು ಪ್ರಾರಂಭವಾಗುತ್ತವೆ. ಹೆಚ್ಹೆಚ್ಚು ಬೆವರುವಿಕೆ ಮತ್ತು ಚರ್ಮದ ಸೋಂಕಿಗೆ ಕೂಡ ಇದು ಕಾರಣವಾಗುತ್ತದೆ.
ರಾತ್ರಿ ಬ್ರಾ ಧರಿಸಿ ಮಲಗುವುದರಿಂದ ಆಗುವ ತೊಂದರೆಗಳು…
ಫಂಗಲ್ ಸೋಂಕು : ರಾತ್ರಿ ಬ್ರಾ ಧರಿಸಿ ಮಲಗುವುದರಿಂದ ಸ್ತನಗಳಲ್ಲಿ ಅತಿಯಾದ ಬೆವರುವಿಕೆ ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ದದ್ದು ಮತ್ತು ಅಲರ್ಜಿ ಕೂಡ ಉಂಟಾಗಬಹುದು.
ತುರಿಕೆ ಹೆಚ್ಚಳ: ಇಡೀ ದಿನ ಬ್ರಾ ಧರಿಸಿದರೆ ದೇಹಕ್ಕೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ರಾತ್ರಿ ಕೂಡ ಬ್ರಾ ಧರಿಸಿ ಮಲಗುವುದರಿಂದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲರ್ಜಿ ಮತ್ತು ತುರಿಕೆ ಜಾಸ್ತಿಯಾಗಬಹುದು.
ಅಸಮರ್ಪಕ ರಕ್ತ ಪರಿಚಲನೆ: ರಾತ್ರಿ ಬ್ರಾ ಧರಿಸಿ ಮಲಗಿದರೆ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದರಿಂದ ಚೆನ್ನಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ.
ಸ್ತನ ಕ್ಯಾನ್ಸರ್ ಅಪಾಯ: ತಜ್ಞರ ಪ್ರಕಾರ ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಸ್ನಾಯುಗಳು ಮತ್ತು ನರಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದಾಗಿ ಸ್ತನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.