ಸೇಬು ತಿನ್ನಿ ಎಂದು ವೈದ್ಯರೇನೋ ಹೇಳಿ ಬಿಡುತ್ತಾರೆ. ಆದರೆ ಇದನ್ನು ಯಾವ ಹೊತ್ತಿನಲ್ಲಿ ಎಷ್ಟು ಸೇವಿಸಬೇಕು ಎಂಬ ಗೊಂದಲ ನಿಮ್ಮಲ್ಲೇ ಉಳಿದು ಬಿಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.
ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಗಾದೆಯೇ ಇದೆ. ತುಸು ದುಬಾರಿಯಾದರೂ ನಿತ್ಯ ಒಂದು ಸೇಬು ತಿನ್ನುವುದರಿಂದ ನಿಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನಕ್ಕೆ ಒಂದು ಸೇಬು ತಿಂದರೆ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತದೆ.
ಸೇಬು ದೇಹದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಹೃದಯವನ್ನು ರಕ್ಷಿಸುತ್ತದೆ. ಅಸ್ತಮಾ ನಿವಾರಣೆಗೂ ಇದು ಸಹಕಾರಿ. ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಇದು ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ.
ಆ್ಯಪಲ್ ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ದೊರೆಯದು. ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತಿನ್ನುವುದು ಬಹಳ ಒಳ್ಳೆಯದು. ಬೆಳಗಿನ ತಿಂಡಿಯಾದ ಅಥವಾ ಮಧ್ಯಾಹ್ನದ ಊಟದ ಒಂದು ಗಂಟೆ ಬಳಿಕ ಸೇಬು ತಿನ್ನಿ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಒಳ್ಳೆಯದಲ್ಲ.