ಅಲೆಕ್ಸಾ ಸೇವೆಗೆ ಬಿಗ್ ಬಿ ಅಮಿತಾಭ್ ಬಚ್ಚನ್ ದನಿಯನ್ನು ತರಲು ಅಮೇಜ಼ಾನ್‌ಗೆ ಎರಡು ದೊಡ್ಡ ತಾಂತ್ರಿಕ ಸವಾಲುಗಳು ಬಂದಿದ್ದವಂತೆ.
ಭಾರತೀಯರು ಚೆನ್ನಾಗಿ ಗುರುತಿಸಬಲ್ಲ ದನಿಯಾಗಿರುವ ಬಿಗ್ ಬಿ ರ ದನಿಯಂತೆಯೇ ಮಾತನಾಡಲು ಅಲೆಕ್ಸಾಗೆ ತರಲು ಭಾರೀ ಸಾಹಸವನ್ನೇ ಮಾಡಿದ್ದೇವೆ ಎಂದು ಅಲೆಕ್ಸಾ ಸ್ಪೀಚ್‌ನ ಉಪಾಧ್ಯಕ್ಷ ಮನೋಜ್ ಸಿಂಧ್ವಾನಿ ತಿಳಿಸಿದ್ದಾರೆ. ಬಿಗ್ ಬಿ ರ ದನಿಯಲ್ಲಿ ಭಾವ ಶ್ರೀಮಂತಿಕೆ ಇರುವ ಕಾರಣ ಅದನ್ನು ಯಥಾವತ್ತಾಗಿ ಅಲೆಕ್ಸಾಗೆ ಸಿಂಕ್ ಮಾಡುವುದು ಭಾರೀ ಸವಾಲಾಗಿತ್ತಂತೆ.
ಅಲೆಕ್ಸಾಳನ್ನು ಆಕ್ಟಿವೇಟ್ ಮಾಡಿದಂತೆ ಬಿಗ್ ಬಿ ದನಿಯನ್ನು ಆಕ್ಟಿವೇಟ್ ಮಾಡಲು ’ಅಮಿತ್‌ಜೀ’ ಎಂದು ಬಳಸುವ ನಿರ್ಣಯ ತೆಗೆದುಕೊಳ್ಳಲು ಸಹ ಬಹಳ ಚಿಂತನೆ ಮಾಡಲಾಗಿದೆ. ಬಿಗ್ ಬಿ ರನ್ನು ಪ್ರೀತಿಯಿಂದ ಕರೆಯುವ ’ಮಿ. ಬಚ್ಚನ್’, ’ಬಚ್ಚನ್ ಜೀ’, ’ಅಮಿತಾಭ್ ಬಚ್ಚನ್ ಜೀ’, ’ಅಮಿತಾಭ್ ಜೀ’ ಎಂಬ ಆಯ್ಕೆಗಳ ನಡುವೆ ಅಮೇಜ಼ಾನ್ ತಂಡ ಗೊಂದಲದಲ್ಲಿತ್ತು. ಆದರೆ ’ಅಮಿತ್ ಜೀ’ ಹೆಸರು ಬಹಳ ಚಿಕ್ಕ ಹಾಗೂ ಚೊಕ್ಕದಾಗಿದ್ದ ಕಾರಣ ಅದನ್ನೇ ಆರಿಸಿಕೊಳ್ಳಲಾಯಿತು ಎಂದು ಸಿಂಧ್ವಾನಿ ತಿಳಿಸಿದ್ದಾರೆ.
ವರ್ತಕನಿಂದ 45 ಲಕ್ಷ ದೋಚಿದ ಕಾಂಗ್ರೆಸ್ ಮಾಜಿ ಶಾಸಕನ ಪುತ್ರ ಅರೆಸ್ಟ್
ಅಲೆಕ್ಸಾ ದನಿ ಫೀಚರ್‌ಗೆ ದನಿ ಕೊಟ್ಟಿರುವ ಮಂದಿಯಲ್ಲಿ ಅಮೆರಿಕದ ಹೊರಗಿನ ಮೊದಲ ವ್ಯಕ್ತಿಯಾಗಿದ್ದಾರೆ ಬಿಗ್ ಬಿ. ಡಿಸೆಂಬರ್ 2019ರಲ್ಲಿ ಅಲೆಕ್ಸಾಗೆ ಮೊದಲ ದನಿಯಾಗಿ ಅಮೆರಿಕನ್ ನಟ ಸ್ಯಾಮುಯೆಲ್ ಎಲ್ ಜಾಕ್ಸನ್‌ರ ದನಿಯನ್ನು ಕೊಡಲಾಗಿತ್ತು.
ಬಿಗ್ ಬಿ ರ ದನಿಯನ್ನು ಕೃತಕ ಬುದ್ಧಿಮತ್ತೆ (ಎಐ) ಮೂಲಕ ಪಿಕ್ ಮಾಡಿ ಅಲೆಕ್ಸಾ ವ್ಯವಸ್ಥೆ ಅದರ ಮೇಲೆ ಕೆಲಸ ಮಾಡುವಂತೆ ಮಾಡಲು ಭಾರತ, ಪೋಲೆಂಡ್, ಬ್ರಿಟನ್ ಹಾಗೂ ಅಮೆರಿಕದ ತಂತ್ರಜ್ಞರ ತಂಡಗಳು ಕೆಲಸ ಮಾಡಿವೆ. ಸಾಕಷ್ಟು ಸೆಶನ್‌ಗಳಲ್ಲಿ ಬಚ್ಚನ್ ದನಿಯನ್ನು ನೋಟ್ ಮಾಡಿಕೊಂಡು ಅಲೆಕ್ಸಾಗೆ ಅವರ ದನಿಸಿರಿಯನ್ನು ಸಿಂಕ್ ಮಾಡಲಾಗಿದೆ.
ಈ ಕೆಲಸಕ್ಕೆ ಬಳಸಲಾದ ನ್ಯೂಟ್ರಲ್ ಟೆಕ್ಸ್ಟ್-ಟು-ಸ್ಪೀಚ್ ವ್ಯವಸ್ಥೆ ನೀವು ಪ್ರಶ್ನೆ ಕೇಳಿದ ಮೇಲೆ ಅದನ್ನು ಲಿಖಿತ ರೂಪಕ್ಕೆ ಪರಿವರ್ತಿಸಿ, ಬಳಿಕ ಉತ್ತರಗಳನ್ನು ಶೋಧಿಸಿ, ಆ ಉತ್ತರವನ್ನು ಲಿಖಿತ ರೂಪಕ್ಕೆ ಪರಿವರ್ತಿಸಿ ಬಳಿಕ ಅದನ್ನು ಅಮಿತಾಭ್ ಬಚ್ಚನ್‌ರ ದನಿಗೆ ಪರಿವರ್ತಿಸುತ್ತದೆ.