1994 ರಲ್ಲಿ ವಿಶ್ವ ಸುಂದರಿ ಕಿರೀಟ ಪಡೆದ ನಟಿ ಐಶ್ವರ್ಯಾ ರೈ ಇಂದಿಗೂ ಆ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಆಗಾಗ್ಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡ್ರೂ ಅವರ ಬೇಡಿಕೆ ಹಾಗೇ ಇದೆ. 1997 ರಲ್ಲಿ ಮಣಿರತ್ನಂ ಅವರ ‘ಇರುವರ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಭಾರತದಲ್ಲಿ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇರುವರ್ ಚಿತ್ರದ ಬಳಿಕ ಅವರು ಅದೇ ವರ್ಷದಲ್ಲಿ ರಾಹುಲ್ ರಾವೈಲ್ ಅವರ ಔರ್ ಪ್ಯಾರ್ ಹೋ ಗಯಾದಲ್ಲಿ ನಟಿಸಿದರು. ತನ್ನ ವೃತ್ತಿಜೀವನದಲ್ಲಿ ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್, ಧೂಮ್ 2, ಗುರು ಮತ್ತು ರೋಬೋಟ್‌ನಂತಹ ಭಾರಿ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಅದಾಗ್ಯೂ ಅಲ್ಬೆಲಾ, ಹಮ್ ಕಿಸೀಸೆ ಕಮ್ ನಹೀ, ದಿಲ್ ಕಾ ರಿಶ್ತಾ, ಕುಚ್ ನಾ ಕಹೋ, ಕ್ಯೂ ಹೋ ಗಯಾ ನಾ, ಫನ್ನೆ ಖಾನ್ ಮತ್ತು ಜಜ್ಬಾದಂತಹ ಫ್ಲಾಪ್ ಚಿತ್ರಗಳಲ್ಲೂ ಕಾಣಿಸಿಕೊಂಡರು. ವರದಿಗಳ ಪ್ರಕಾರ ಐಶ್ವರ್ಯ ರೈ 700 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ನಟಿಯಾಗಿದ್ದಾರೆ. ಈ ಮೂಲಕ ಈಗಲೂ ಐಶ್ವರ್ಯ ರೈ ಬಚ್ಚನ್ ದೇಶದ ಅತ್ಯಂತ ಶ್ರೀಮಂತ ನಟಿ ಎಂದು ವರದಿಯಾಗಿದೆ.
2024 ರ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಡಿಸೈನರ್ ಜೋಡಿ ಫಲ್ಗುಣಿ ಶೇನ್ ಪೀಕಾಕ್ ಅವರ ಗೌನ್ ಧರಿಸಿ ಮಿಂಚಿದರು.