alex Certify ದೇಶದಲ್ಲೇ ಮೊದಲ ಬಾರಿಗೆ ತಾಯಿ ಗರ್ಭದಲ್ಲೇ ಮಗುವಿಗೆ ರಕ್ತ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲೇ ಮೊದಲ ಬಾರಿಗೆ ತಾಯಿ ಗರ್ಭದಲ್ಲೇ ಮಗುವಿಗೆ ರಕ್ತ ಬದಲಾವಣೆ

ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ತಾಯಿ ಗರ್ಭದಲ್ಲೇ ಮಗುವಿಗೆ ರಕ್ತ ಬದಲಾವಣೆ ಮಾಡಲಾಗಿದೆ. ಅತ್ಯಂತ ಅಪರೂಪದ ರಕ್ತ ಬದಲಾವಣೆಯ ಮೂಲಕ ಏಮ್ಸ್ ವೈದ್ಯರು ತಾಯಿಯ ಹೊಟ್ಟೆಯಲ್ಲಿರುವ ಮಗು ಹಾಗೂ ತಾಯಿಯ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.

ಮಗುವಿಗೆ ತಾಯಿ ಗರ್ಭದಲ್ಲಿಯೇ 6 ಬಾರಿ ರಕ್ತ ಬದಲಾವಣೆ ಮಾಡಿದ್ದು, ಹೃದಯ ವೈಫಲ್ಯವನ್ನು ಕೂಡ ಸರಿಪಡಿಸಲಾಗಿದೆ/ ಹರಿಯಾಣ ಮೂಲದ ಮಹಿಳೆ ಅಪರೂಪದ ಡಿ ರಕ್ತದ ಮಾದರಿ ಹೊಂದಿದ್ದು, ತೀವ್ರ ರಕ್ತದ ಕೊರತೆಯಿಂದ 7 ಬಾರಿ ಗರ್ಭಧಾರಣೆ ವೇಳೆ ಸಮಸ್ಯೆ ಎದುರಾಗಿತ್ತು.

ವೈದ್ಯರು ಮಹಿಳೆಗೆ ವಿಶೇಷ ರಕ್ತ ನೀಡಿ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಏಮ್ಸ್ ಪ್ರಸೂತಿ ತಜ್ಞರು, ಮಹಿಳಾ ತಜ್ಞರು ಸೇರಿದಂತೆ ನಾಲ್ವರು ವೈದ್ಯರ ತಂಡವು ಭಾರತದಲ್ಲಿ ಇಂತಹ ಮೊದಲ ವೈದ್ಯಕೀಯ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ. ವಿಶ್ವದಲ್ಲಿ ಇದುವರೆಗೂ ಕೇವಲ 7 ಇಂತಹ ಚಿಕಿತ್ಸೆಗಳು ನಡೆದಿವೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...