ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ ನಂತರ ನೀವು ಅದನ್ನು ಒಪ್ಪಿಕೊಳ್ಳಬಹುದು.
ಬಾಣಸಿಗ ಅಮೌರಿ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಚಾಕಲೋಟ್ನಿಂದ ಅವರು, ನೈಜ ರೀತಿಯ ಹುಂಡೈ IONIQ ಎಲೆಕ್ಟ್ರಿಕ್ ಅನ್ನು ರೂಪಿಸುತ್ತಾರೆ. ಇದನ್ನು ಸಂಪೂರ್ಣವಾಗಿ ಚಾಕೊಲೇಟ್ ಐಟಂನಿಂದ ತಯಾರಿಸಲಾಗಿದ್ದು, ಕಣ್ಣುಗಳನ್ನು ನಂಬಲು ಸಾಧ್ಯವಿಲ್ಲದಂತಿದೆ.
ಪೋಸ್ಟ್ ಮಾಡಿದ ಕೇವಲ ಮೂರು ದಿನಗಳಲ್ಲಿ, ಅಮೌರಿ ಅವರ ‘ಚಾಕೊಲೇಟ್ ಎಲೆಕ್ಟ್ರಿಕ್ ಕಾರ್’ ಇನ್ಸ್ಟಾಗ್ರಾಮ್ನಲ್ಲಿ ಆರು ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಲಕ್ಷಗಟ್ಟಲೆ ಮಂದಿ ಇದನ್ನು ಇಷ್ಟಪಟ್ಟಿದ್ದಾರೆ.
ಹ್ಯುಂಡೈ ಮೋಟಾರ್ ಇಂಡಿಯಾ ಆಟೋ ಎಕ್ಸ್ಪೋ 2023 ರಲ್ಲಿ ತನ್ನ ಆಲ್-ಎಲೆಕ್ಟ್ರಿಕ್ ಮಾಡೆಲ್ ಐಯೋನಿಕ್ 5 ಅನ್ನು ರೂ 44.95 ಲಕ್ಷಕ್ಕೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ಅದನ್ನೇ ಈ ಬಾಣಸಿಗ ನಕಲು ಮಾಡಿದ್ದು, ನೋಡಿದರೆ ಇದು ಥೇಟ್ ಮೂಲ ಕಾರಿನಂತೆಯೇ ಇದೆ. ನಾನು ನನ್ನ ಕಾರನ್ನು ಸುಲಭವಾಗಿ ತಿನ್ನುತ್ತೇನೆ, ನೀವೂ ತಿನ್ನಬಹುದು ಎಂದು ಬಾಣಸಿಗ ಅಮೌರಿ ತಮಾಷೆ ಮಾಡಿದ್ದಾರೆ.