ನವೆಂಬರ್ 2015 ರಲ್ಲಿ ಒಂದು ಭೀಕರ ಕೊಲೆ ಪ್ರಕರಣ ಪ್ರಪಂಚದ ಗಮನ ಸೆಳೆದಿತ್ತು. ವೇಲ್ಸ್‌ನ, ಬೆಡ್ಡೋದಲ್ಲಿ ಜಾನ್ ಸಬೈನ್ ಅವರ ಅಸ್ಥಿಪಂಜರ ಸಿಕ್ಕಿತ್ತು. ಅವರ ಪತ್ನಿ ಲೇಗ್ ಆನ್ ಸಬೈನ್, ಜಾನ್ ಸೈಬನ್ ಹತ್ಯೆ ಮಾಡಿದ್ದರು.
ಆದ್ರೆ ಪತಿಯ ಅಸ್ಥಿಪಂಜರ ಸಿಗುವ ವೇಳೆಗೆ ಲೇಗ್ ಆನ್ ಸಬೈನ್ ಕೂಡ ಮೃತಪಟ್ಟಿದ್ದಳು. 18 ವರ್ಷಗಳ ಕಾಲ ಪತಿಯ ಹತ್ಯೆಯನ್ನು ಮುಚ್ಚಿಟ್ಟಿದ್ದ ಲೇಗ್ ಆನ್ ಸಬೈನ್ ಕೃತ್ಯವನ್ನು ದಿ ಬಾಡಿ ನೆಕ್ಸ್ಟ್ ಡೋರ್ ಎಂಬ ಸರಣಿಯಲ್ಲಿ ಪ್ರಸಾರ ಮಾಡಲಾಗಿದೆ. ಇದು ಕಳೆದ ದಶಕದ ಅತ್ಯಂತ ವಿಲಕ್ಷಣ ಮತ್ತು ಆಘಾತಕಾರಿ ನಿಜವಾದ ಅಪರಾಧ ಕಥೆಗಳಲ್ಲಿ ಒಂದಾಗಿದೆ.
ನಿಜ ಘಟನೆ ಏನು ? 1997 ರಲ್ಲಿ, 67 ವರ್ಷದ ಅಕೌಂಟೆಂಟ್ ಜಾನ್ ಸಬೈನ್ ಬೆಡ್ಡೌದಲ್ಲಿನ ತನ್ನ ಮನೆಯಿಂದ ಕಣ್ಮರೆಯಾಗಿದ್ದ. ಅವನ ಹೆಂಡತಿ ಜಾಣತನದಿಂದ ವರ್ತಿಸಿದ್ದಳು. ಪತಿ ತನ್ನ ಇಚ್ಛೆಯಂತೆ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದಿದ್ದಳು.
ಆದ್ರೆ ಜಾನ್‌ನನ್ನು ಕಲ್ಲಿನ ಆಭರಣದಿಂದ ಕ್ರೂರವಾಗಿ ಕೊಂದು, ನಂತರ ಅವನ ದೇಹವನ್ನು ಪ್ಲಾಸ್ಟಿಕ್ ಮತ್ತು ಶಾಪಿಂಗ್ ಬ್ಯಾಗ್‌ಗಳಲ್ಲಿ ಸುತ್ತಿ, ಮಮ್ಮಿ ಮಾಡಿ ಹಲವು ಸ್ಥಳಗಳಲ್ಲಿ ಇಟ್ಟಿದ್ದಳು. ಹಾಸಿಗೆಯ ಕೆಳಗೆ, ತೋಟದ ಶೆಡ್ ಸೇರಿದಂತೆ ಅನೇಕ ಕಡೆ ಇಟ್ಟಿದ್ದಳು.
ಹದಿನೆಂಟು ವರ್ಷಗಳ ಕಾಲ ಈ ವಿಷ್ಯವನ್ನು ಲೇಗ್ ಮುಚ್ಚಿಟ್ಟಿದ್ದಳು. ಲೇಗ್ ಸಬೈನ್ ಅಕ್ಟೋಬರ್ 30, 2015 ರಂದು ಮಿದುಳಿನ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಆಕೆ ಸತ್ತ ಮೇಲೆ ಕರಾಳ ರಹಸ್ಯ ಹೊರಬಿದ್ದಿದೆ. ಆಕೆ ಸತ್ತ ಕೆಲವು ವಾರಗಳ ನಂತರ, ಅವಳ ಫ್ರೆಂಡ್ಸ್ ವಸ್ತುಗಳನ್ನು ವಿಂಗಡಿಸುತ್ತಿದ್ದಾಗ, ಜಾನ್ ಶವ ಸಿಕ್ಕಿದೆ.
ತಕ್ಷಣ ಮನೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ ಎಲ್ಲ ಸತ್ಯ ಗೊತ್ತಾಗಿದೆ. ಲೇಗ್ ಸಬೈನ್, ಚೂಪಾದ ಕಪ್ಪೆಯಾಕಾರದ ಆಭರಣದಿಂದ ಪತಿ ತಲೆಗೆ ಹೊಡೆದಿರುವುದು ಗೊತ್ತಾಗಿದೆ. ಶವವನ್ನು ಸುರಕ್ಷಿತಗೊಳಿಸಲು, ವಾಸನೆ ಬರದಂತೆ ತಡೆಯಲು ಕೆಮಿಕಲ್ ಬಳಸಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.
ತನ್ನ ಸಾವಿಗೆ ಮುನ್ನ ಲಾಗ್, ನಾನು ಪ್ರಸಿದ್ಧಿ ಆಗಬಹುದಿತ್ತು. ನನ್ನ ಬ್ಯಾಗ್ ನಲ್ಲಿರುವ ಶವದಿಂದ ಎಂದು ಕೇಶ ವಿನ್ಯಾಸಕಿಗೆ ಹೇಳಿದ್ದಳಂತೆ.