ಹೈದರಾಬಾದ್‌ನ ಅನಾಥಾಶ್ರಮದಲ್ಲಿ ವಾಸಿಸುತ್ತಿರುವ 12 ಮತ್ತು 14 ವರ್ಷದ ಸಹೋದರಿಯರಿಬ್ಬರು ಫೋಟೋವೊಂದನ್ನು ನೋಡಿ ತಮ್ಮ ಕಿರಿಯ ಸಹೋದರಿಯನ್ನು ಗುರುತಿಸಿದ್ದಾರೆ.
ವಿಜ್ಞಾನ ಮೇಳದ ಚಿತ್ರವೊಂದರಲ್ಲಿ ತಮ್ಮಂತೆ ಕಂಡ ಬಾಲಕಿಯೊಬ್ಬಳು ತಮ್ಮ ಒಡಹುಟ್ಟಿದವಳು ಎಂದು ಬಾಲಕಿಯರು ತಿಳಿಸುತ್ತಲೇ ಅನಾಥಾಶ್ರಮದ ಪದಾಧಿಕಾರಿಗಳು ಡಿಎನ್‌ಎ ಪರೀಕ್ಷೆ ಮೂಲಕ ಅವರ ಮಾತುಗಳನ್ನು ಖಾತ್ರಿ ಪಡಿಸಿಕೊಂಡಿದ್ದಾರೆ.
ಮೂವರೂ ಹೆಣ್ಣು ಮಕ್ಕಳು ತಮ್ಮ ತಂದೆಯೊಂದಿಗೆ ವಾಸಿಸುತ್ತಿದ್ದರು. ಆದರೆ ಮೂರು ವರ್ಷಗಳ ಹಿಂದೆ ಆತ ನಿಧನರಾದ ಬಳಿಕ ಇಬ್ಬರು ಹೆಣ್ಣುಮಕ್ಕಳನ್ನು ಅನಾಥಾಶ್ರಮದವರು ಕರೆದೊಯ್ದಿದ್ದಾರೆ. ಆದರೆ ಆ ವೇಳೆ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಮೂರನೇ ಹೆಣ್ಣುಮಗು ಇವರಿಂದ ಬೇರಾಗಿದೆ.
BIG NEWS: ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ; ಸಚಿವರ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ
ಒಂದು ದಿನ ವಿಜ್ಞಾನ ಮೇಳವೊಂದರ ಚಿತ್ರಗಳು ಅನೇಕ ಆಶ್ರಮಗಳಲ್ಲಿ ಬಿತ್ತರಗೊಂಡಿದೆ. ಆ ಸಂದರ್ಭದಲ್ಲಿ ಫೋಟೋವೊಂದರಲ್ಲಿದ್ದ ತಮ್ಮ ಪುಟ್ಟ ತಂಗಿಯನ್ನು ಗುರುತಿಸಿದ ಬಾಲಕಿಯರು ಅನಾಥಾಶ್ರಮದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ತನ್ನ ಅಜ್ಜಿ ಮೃತಪಟ್ಟ ಬಳಿಕ ಬೀದಿಗಳಲ್ಲಿ ಅಲೆಯುತ್ತಿದ್ದ ಮೂರನೇ ಹೆಣ್ಣುಮಗುವನ್ನು ರಕ್ಷಿಸಿದ ಹೈದರಾಬಾದ್ ಜಿಲ್ಲಾ ಕಲ್ಯಾಣ ಇಲಾಖೆ ಆಕೆಯನ್ನು ಮತ್ತೊಂದು ಅನಾಥಾಶ್ರಮಕ್ಕೆ ಬಿಟ್ಟಿತ್ತು.
ಇದೀಗ ಮೂವರೂ ಸಹೋದರಿಯರು ಒಂದೇ ಕಡೆ ಜೊತೆಯಾಗಿದ್ದಾರೆ.