ತೃತೀಯ ಲಿಂಗಿಗಳ ಸಮುದಾಯಕ್ಕೆ ಭಾರತದಲ್ಲಿ ಘನತೆಯಿಂದ ಬದುಕುವ ವಾತಾವರಣ ಇನ್ನೂ ಕನಸಾಗಿಯೇ ಉಳಿದಿದೆ. ಚೆನ್ನೈನ ತೃತೀಯ ಲಿಂಗಿ ಶೈನಾ ಬಾನು ಈ ಸಂಬಂಧ ಮಾಡಿದ್ದ ಫೇಸ್ಬುಕ್ ಪೋಸ್ಟ್ ಒಂದು ಈ ವಿಚಾರವನ್ನು ಒತ್ತಿ ಒತ್ತಿ ತಿಳಿಸಿತ್ತು.
ಚೆನ್ನೈನ ಎಗ್ಮೋರ್ ಪ್ರದೇಶದಲ್ಲಿ ’ಟ್ರಾನ್ಸ್‌ಜಂಡರ್ ಟೇಸ್ಟಿ ಹಟ್’ ಹೆಸರಿನಲ್ಲಿ ಈಟರಿ ನಡೆಸುವ ಶೈನಾಗೆ ಯಾರೂ ಸಹ ತನ್ನ ಊಟದಂಗಡಿಗೆ ಬಾರದೇ ಇದ್ದ ಕಾರಣ ಬೇಸರವಾಗಿತ್ತು. ಆದರೆ ಆಕೆಯ ಪೋಸ್ಟ್ ವೈರಲ್ ಆಗುತ್ತಲೇ, ಜನರು ಆಕೆಯ ಊಟದಂಗಡಿಗೆ ದಾಂಗುಡಿ ಇಟ್ಟಿದ್ದಾರೆ.
ಕೊರೋನಾ ಸೋಂಕು ತಗುಲಿದ್ದ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ
“ಪುರುಷರು ಅಥವಾ ಮಹಿಳೆಯರು ಊಟದಂಗಡಿ ಇಟ್ಟರೆ ಜನರು ಭೇಟಿ ಕೊಡುತ್ತಾರೆ. ಆದರೆ ತೃತೀಯ ಲಿಂಗಿ ಮಹಿಳೆ ನಡೆಸುವ ಈಟರಿಗೆ ನೀವು ಬುರುವಿರಾ? ಹೀಗಾದಲ್ಲಿ ನಾವು ಕಷ್ಟ ಪಟ್ಟು ದುಡಿಯುವುದಿಲ್ಲ ಎಂದು ಹೇಳಿಕೊಂಡು ನಮ್ಮನ್ನೇಕೆ ಈ ಸಮಾಜ ಬಯ್ಯುತ್ತದೆ?,” ಎಂದು ವಿಡಿಯೋದಲ್ಲಿ ಈಕೆ ಹೇಳಿಕೊಂಡಿದ್ದು ವೈರಲ್ ಆಗಿತ್ತು.
ಈ ವಿಷಯವನ್ನು ಅನೇಕ ಮಂದಿ ಯೂಟ್ಯೂಬರ್‌ಗಳು, ಕಾರ್ಯಕರ್ತರು ಹಾಗೂ ಇನ್‌ಫ್ಲುಯೆನ್ಸರ್‌ಗಳು ವೈರಲ್ ಮಾಡಿದ್ದು, ಟ್ರಾನ್ಸ್‌ಜಂಡರ್ ಟೇಸ್ಟಿ ಹಟ್ ಜನಪ್ರಿಯವಾಗುವಂತೆ ಮಾಡಿದ್ದಾರೆ. ಇದೀಗ ಚೆನ್ನೈನ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದು ತಿನ್ನುತ್ತಾರೆ ಮಂದಿ.
ಇದೇ ವೇಳೆ, ಸೆಂಬಾರುತಿ ತಿರುನಂಗಾಯ್ಗಳ್ ಸ್ವಸಹಾಯ ಸಮೂಹ ಹಾಗೂ ಖಾಸಗಿ ಕಾಲೇಜುಗಳ ಸಹಾಯದಿಂದ ಶೈನಾ ವೃತ್ತಿಗೆ ಒಂದು ಒಳ್ಳೆ ತಿರುವು ಸಿಕ್ಕಿದೆ. ಇದೀಗ ಘನತೆಯಿಂದ ದುಡಿದು ತಿನ್ನುತ್ತಿರುವ ಶೈನಾ ಯಾವುದೇ ಲಿಂಗದ ಮಂದಿಗೂ ಪ್ರೇರಣೆಯಾಗಿದ್ದಾರೆ.