ಹಲವು ಮಂದಿ ಕೆಲಸದಲ್ಲಿ ಅಥವಾ ಆಟ ಏನೇ ಆಗಿರಲಿ ಕಷ್ಟ ಬಂದಾಗ ಅಯ್ಯೋ ತನ್ನಿಂದಾಗಲ್ಲಪ್ಪ ಅಂತಾ ಬಿಟ್ಟು ಬಿಡುವವರೇ ಹೆಚ್ಚು. ಆದರೆ, ನಾವು ಎಂದಿಗೂ ನಮ್ಮತನ ಬಿಟ್ಟುಕೊಡಬಾರದು, ಹೋರಾಟ ಮುಂದುವರಿಸಬೇಕು ಅನ್ನೋದಕ್ಕೆ ಈ ಬಾಲಕಿಯ ವಿಡಿಯೋ ನೋಡಿದ್ರೆ ಅನ್ನಿಸದೆ ಇರಲ್ಲ.
BIG NEWS: ರಾಜ್ಯದಲ್ಲಿಂದು ಕೊರೋನಾ ಇಳಿಮುಖ, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್
ಹೌದು, ಸ್ಪೂರ್ತಿದಾಯಕ ಹಾಗೂ ಹೃದಯಸ್ಪರ್ಶಿಯಾಗಿರುವ 2020ರ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಮಕ್ಕಳು ಸ್ಕೇಟಿಂಗ್ ಆಡುತ್ತಿದ್ದರು. ಈ ವೇಳೆ 4 ವರ್ಷದ ಬಾಲಕಿಯೊಬ್ಬಳು ಜಾರಿ ಬಿದ್ದಿದ್ದಾಳೆ. ಓಡು, ಓಡು ಅನ್ನೋ ಪ್ರೋತ್ಸಾಹದ ಮಾತು ಕೇಳಿದ ಬಾಲಕಿ ಬಿದ್ದರೂ ಮತ್ತೆ ತನ್ನ ಆಟ ಮುಂದುವರಿಸಿ ಎಲ್ಲರಿಗಿಂತ ಮುಂಚೂಣಿ ಸ್ಥಾನ ಪಡೆದಿದ್ದಾಳೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.
https://www.youtube.com/watch?v=f_aOWGpD4SM